ಮೂಡುಬಿದಿರೆ: ವೇಣುಗೋಪಾಲ ಕಾಲೋನಿ ವೆಲ್ ಫೇರ್ ಅಸೋಸಿಯೇಷನ್ ಕೊಡಂಗಲ್ಲು ಮೂಡುಬಿದಿರೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಭಾರತ ಜ್ಯೋತಿ ಪ್ರಶಸ್ತಿ ಪುರಸ್ಕೃತ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ ಅವರನ್ನು ಸನ್ಮಾನಿಸಲಾಯಿತು.

kodangallu

ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕಾಲೋನಿಯ ರಸ್ತೆ ದುರಸ್ತಿಮಾಡುವ ಭರವಸೆ ನೀಡಿದರು.  ಪುರಸಭೆಯ ಉಪಾಧ್ಯಕ್ಷ ವಿನೋದ್ ಸೆರಾವೊ, ಪುರಸಭೆ ಸದಸ್ಯ ಸುರೇಶ್ ಕೊಟ್ಯಾನ್, ಉದ್ಯಮಿ ಅನಿಲ್ ಲೋಬೊ ಅತಿಥಿಗಳಾಗಿದ್ದರು.  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವೇಣುಗೋಪಾಲ ಕಾಲೋನಿ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಚಂದ್ರ ಸ್ವಾಗತಿಸಿದರು. ವೆಂಕಟೇಶ್ ಭಟ್ ಬಹುಮಾನ ವಿಜೇತರ ವಿವರ ನೀಡಿದರು. ಕಾರ್ಯದರ್ಶಿ ಶೇಖರ್ ಹೆಗ್ಡೆ ವರದಿ ವಾಚಿಸಿದರು. ಹರೀಶ್ ಸನ್ಮಾನಿತರ ಪರಿಚಯ ಮಾಡಿದರು. ಕೋಶಾಧಿಕಾರಿ ಗೋಪಾಲ ಮೊೈಲಿ ವಂದಿಸಿದರು. ಜಯರಾಮ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *