ಮೂಡಬಿದಿರೆ: ಜೀವನದ ವಿವಿಧ ಮಗ್ಗುಲುಗಳನ್ನು ನಾವು ವಿಭಿನ್ನ ದೃಷ್ಟಿಕೋನಗಳಿಂದ ನೋಡುವುದೇ ಜೀವನ ದರ್ಶನವಾಗಿದೆ. ಬದುಕಿನ ವಿವಿಧ ಸ್ತರಗಳು, ವ್ಯಕ್ತಿಗಳು, ನಡವಳಿಕೆಗಳು ಎಲ್ಲವೂ ಈ ಜೀವನ ದರ್ಶನದ ಭಾಗ ಎಂದು, ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ಕುಮಾರ ಐತಾಳ್ ತಿಳಿಸಿದರು.
ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ, ಆಳ್ವಾಸ್ ಕನ್ನಡ ಸಂಸ್ಕೃತಿ ಅದ್ಯಯನ ಕೇಂದ್ರ, ಆಳ್ವಾಸ್ ಕಾಲೇಜು ಆಯೋಜಿಸಿದ್ದ `ಸುಭಾಷಿತ ಮತ್ತು ಜೀವನ ದರ್ಶನ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಎಲ್ಲಾ ಧರ್ಮಗಳೂ ಉತ್ತಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತವೆ. ಬೌದ್ಧ ಧರ್ಮದಿಂದ ಕೇಳಿ, ಜೈನ ಧರ್ಮದಂತೆ ನಡೆದು, ವೈಧಿಕ ಧರ್ಮದಂತೆ ಆಚರಣೆಗಳನ್ನು ಮಾಡಬೇಕು ಎಂದರು. ಕಾರ್ಯದಕ್ಷತೆ, ಕಲ್ಯಾಣ ಚಿಂತನೆ, ಧೃಡ ಮನಸ್ಸು, ತಾಳ್ಮೆ, ಕಷ್ಟ ಸಹಿಷ್ಣುತೆ, ಸಂತೋಷದಿಂದಿರುವುದು, ಉತ್ತಮ ನಡತೆ, ಕಾಯೋತ್ಸವದ ಜೀವನಕ್ಕೆ ಭೂಷಣ ಎಂದರು. ಕನ್ನಡ ವಿಭಾಗದ ಉಪನ್ಯಾಸಕ ಯೋಗೀಶ ಕೈರೋಡಿ, ಚಂದ್ರಶೇಖರ ಕರಬ ಉಪಸ್ಥಿತರಿದ್ದರು.
