ಬಂಟ್ವಾಳ: ತಾಲ್ಲೂಕಿನ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಉಚಿತ ಸೈಕಲನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ವಿತರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಸಾಲೆ, ಸದಸ್ಯರಾದ ಶ್ರೀ ಶ್ರೀನಿವಾಸ ಆಚಾರ್ ಮತ್ತು ನೂಜಿಬೈಲು ನಾರಾಯಣ ಭಟ್, ಮುಖ್ಯಶಿಕ್ಷಕ ವಿ. ಶ್ರೀರಾಮಮೂರ್ತಿ, ದೈಹಿಕ ಶಿಕ್ಷಕ ರಾಜೇಶ್, ಜಗನ್ನಾಥ ಪುರುಷ ಮತ್ತಿತರರು ಇದ್ದರು.
