ಬಂಟ್ವಾಳ : ಶಾಸಕರ ಅನುದಾನದಿಂದ 10ಲಕ್ಷ ರೂ. ವೆಚ್ಚದಲ್ಲಿ ಶೇರಾ-ಓಣಿಬಾಗಿಲು ರಸ್ತೆ ಕಾಮಗಾರಿಗೆ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಚಿದಾನಂದ ಕಡೇಶ್ವಾಲ್ಯ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ನರೇಂದ್ರ ಬಾಬು, ಪದ್ಮರಾಜ್ ಗೌಡ ಪ್ರಮುಖರಾದ ಪುರುಷೋತ್ತಮ ಶೆಟ್ಟಿ, ಗಂಗಾಧರ ಶೇರಾ, ಚೆನ್ನಪ್ಪ ಅಂಚನ್, ವಿಠಲ ಶೆಟ್ಟಿ, ಸಜಿತ್ ಶೆಟ್ಟಿ, ಹೊನ್ನಪ್ಪ ನಾಯ್ಕ, ಶೀನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
