ಮೂಡುಬಿದಿರೆ : ತುಳು ಸಾಹಿತಿ, ಉಡಲ್ ಪತ್ರಿಕೆಯ ಸಂಪಾದಕಿ ಜಯಂತಿ ಎಸ್.ಬಂಗೇರಾ ಅವರು ಬರೆದಿರುವ “ಪೂಜೆದ ಪೂ” ತುಳು ನಾಟಕ ಕೃತಿಯನ್ನು ಉದ್ಯಮಿ ಶ್ರೀಪತಿ ಭಟ್ ಅವರು ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಅಲ್ಪ ವಿದ್ಯಾಭ್ಯಾಸವನ್ನು ಪಡೆದಿರುವ ಜಯಂತಿ ಎಸ್.ಬಂಗೇರಾ ಅವರು ಈಗಾಗಲೇ ಹಲವು ನಾಟಕ, ಕಾದಂಬರಿ ಹಾಗೂ ಸಣ್ಣ ಕತೆಗಳನ್ನು ಬರೆದು ಅನೇಕ ಪ್ರಶಸ್ತಿಗಳಿಗೆ ಭಾಜನರಾಗುವ ಮೂಲಕ ತುಳು ಸಾಹಿತ್ಯ ಲೋಕದಲ್ಲಿ ಮಾನ್ಯತೆಯನ್ನು ಪಡೆದಿದ್ದಾರೆ. ಅಲ್ಲದೆ ತ್ರೈಮಾಸಿಕ ಪತ್ರಿಕೆಯನ್ನು ಕಳೆದ ಏಳು ವರ್ಷಗಳಿಂದ ಸತತವಾಗಿ ಹೊರ ತಂದಿದ್ದಾರೆ. ಇವರಿಗೆ ಮುಂದೆಯೂ ಅನೇಕ ಪುಸ್ತಕಗಳನ್ನು ಬರೆಯುವ ಉತ್ಸಾಹ ಮೂಡಲಿ ಮತ್ತು ಜಿಲ್ಲಾ, ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಶುಭ ಹಾರೈಸಿದರು.
ಹಿರಿಯ ರಂಗನಟ ಇಂದು ಎಸ್.ಮಂಗಳೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೃತಿಗಾರ್ತಿ ಜಯಂತಿ ಎಸ್.ಬಂಗೇರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪ್ರೇಮಶ್ರೀ ಕಲ್ಲಬೆಟ್ಟು ವಂದಿಸಿದರು.
