ಮೂಡುಬಿದಿರೆ: ವಿವೇಕಾನಂದರ ಜೀವಿತಾವಧಿ ಸುದೀರ್ಘವಲ್ಲದಿದ್ದರೂ, ಅವರ ಚಿಂತನೆಗಳು ಅಜರಾಮರವಾಗಿವೆ. ನಿಜಕ್ಕೂ ಭಾರತದ ವಿಭೂತಿ ಪುರುಷರಲ್ಲಿ ವಿವೇಕಾನಂದರು ಆದರ್ಶಪ್ರಾಯರು ಎಂದು ಎಕ್ಸಲೆಂಟ್ ಪ.ಪೂ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸದಾಶಿವ ಶೆಟ್ಟಿಗಾರ್ ಹೇಳಿದರು.
ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಧೆಗಳ ಆವರಣದಲ್ಲಿ ನಡೆದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು. ಎಕ್ಸಲೆಂಟ್ ವಿದ್ಯಾಸಂಸ್ಧೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ವಿದ್ಯಾರ್ಥಿ ಸಮೂಹಕ್ಕೆ ವಿವೇಕಾನಂದರ ಚಿಂತನೆಗಳು ತಲುಪಬೇಕಾದ ಅಗತ್ಯವಿದೆ ಎಂದರು.
ಎಕ್ಸಲೆಂಟ್ ವಿದ್ಯಾಸಂಸ್ಧೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಸುರೇಶ್ ಬಾಬು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕ ಲಕ್ಷ್ಮಿನಾರಾಯಣ ಕಾಮತ್ ಕಾರ್ಯಕ್ರಮ ನಿರೂಪಿಸಿದರು ಪ್ರಜ್ವಲ್ ವಂದಿಸಿದರು.
