ಸುದ್ದಿ9ಮೂಡುಬಿದರೆ: ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರವ್ಯಾಪಿಯಾಗಿ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ತಮ್ಮ ಹತ್ತು ಬೇಡಿಕೆಗಳಿಗಾಗಿ ಹೋರಾಡುತ್ತಲೇ ಬಂದಿವೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ಬೆಲೆ ಏರಿಕೆಯ ಹೊಡೆತದಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ನಾಯಕರಾದ ಹರೀಶ್ ನಾಯಕ್ ಹೇಳಿದ್ದಾರೆ.
ಅವರು ಕಾರವಾರದಲ್ಲಿ ಉದ್ಘಾಟನೆಗೊಂಡು ಮಂಗಳವಾರ ಮೂಡುಬಿದರೆಗೆ ಆಗಮಿಸಿದ ಸಿಐಟಿಯು ನೇತೃತ್ವದ ಕಾರ್ಮಿಕರ ಹಕ್ಕುಗಳ ಜಾಗೃತಿ ಜಾಥಾವನ್ನು ವಲಯ ಸಿಐಟಿಯು ವತಿಯಿಂದ ಸ್ವಾಗತಿಸಿ ಮಾತನಾಡಿದರು.
ಜಿಲ್ಲಾ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ ,ವಸಂತ ಆಚಾರಿ ಜಾಥಾದ ನೇತೃತ್ವ ವಹಿಸಿದ್ದರು. ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷೆ ರಮಣಿ ಸ್ವಾಗತಿಸಿದರು. ಕಾರ್ಯದರ್ಶಿ ರಾಧಾ ವಂದಿಸಿದರು. ಸಿಐಟಿಯು ಶಂಕರ, ಗಿರಿಜ, ಲಕ್ಷ್ಮೀ ಉಪಸ್ಥಿತರಿದ್ದರು.

