ಮಂಗಳೂರು: ದೇಶದಾದ್ಯಂತ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗುರುತಿಸಿ ವಿಧ್ಯಾರ್ಥಿ ವೇತನ ನೀಡಿ ಬಡ ವಿಧ್ಯಾರ್ಥಿಗಳ ಬದುಕು ಕಟ್ಟುವಲ್ಲಿ ಪ್ರೋತ್ಸಾಹಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ “ರಾಷ್ಟ್ರೀಯ ವಿಧ್ಯಾರ್ಥಿ ವೇತನ” ಕಾರ್ಯಕ್ರಮ ಶ್ಲಾಘನೀಯ ಎಂದು ಜೆ.ಆರ್.ಲೋಬೋ ಮಂಗಳೂರು ಉತ್ತರ ಶಾಸಕರು ದಿನಾಂಕ 15.1.2017ರಂದು ಮಂಗಳೂರು ಜಮೀಯ್ಯತ್ತುಲ್ ಫಲಾಹ್ ಅಡಿಟೋರಿಯಂನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜಿಸಿದ “ರಾಷ್ಟ್ರೀಯ ವಿಧ್ಯಾರ್ಥಿ ವೇತನ” ಸಮಾರಂಭದಲ್ಲಿ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನದ ಚೆಕ್ ನೀಡಿ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷರು ಮಾತನಾಡುತ್ತಾ ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ವಿಧ್ಯಾಭ್ಯಾಸಕ್ಕೆ ಮಹತ್ವ ನೀಡಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕರಿಸಿದರೆ ದೇಶ ಉತ್ತುಂಗಕ್ಕೆ ಏರಬಹುದು. ವಿವಿಧತೆಯಲ್ಲಿ ಏಕತೆ ಇರುವ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಹಾಗು ನಂತರದಲ್ಲಿ ದೇಶಕ್ಕಾಗಿ ಮುಸ್ಲಿಮ್ ಸಮಾಜ ಮಹತ್ತರ ಕೊಡುಗೆಗಳನ್ನು ನೀಡಿದೆ, ಮುಂದಕ್ಕೂ ವಿಧ್ಯಾರ್ಥಿಗಳು ವಿಧ್ಯಾ ಸಂಪನ್ನರಾಗಿ ತಮ್ಮ ಪ್ರತಿಭೆಗಳನ್ನು ದೇಶಕ್ಕಾಗಿ ಧಾರೆಯೆರೆದು ನಮ್ಮ ನಾಡನ್ನು ಉತ್ತುಂಗಕ್ಕೆ ಏರಿಸುವಲ್ಲಿ ಸಹಕರಿಸಬೇಕಾದ ಕರ್ತವ್ಯವಿದೆ. 1986ರಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸ್ಥಾಪನೆಗೊಂಡು ಸಮುದಾಯವನ್ನು ಅಭಿವೃದ್ಧಿ ಪಡಿಸುವಲ್ಲಿ ಹಲವಾರಿ ಯೋಜನೆಗಳನ್ನು ರೂಪಿಸಿಕೊಂಡಿದೆ, ಈ ನಿಟ್ಟಿನಲ್ಲಿ ಹಲವು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಈ ಸಂಘಟನೆಯು ಸಮುದಾಯದ ಹಾಗೂ ಹಿಂದುಳಿದ ವರ್ಗದ ಶ್ರೇಯಾಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಘಟನೆಯಾದರಿಂದ ಸಮುದಾಯವೊಂದರ ಅಭಿವೃದ್ಧಿಗೆ ವಿಧ್ಯಾಭ್ಯಾಸವಿಲ್ಲದೆ ಸಾಧ್ಯವೇಯಿಲ್ಲ, ಆದ್ದರಿಂದ ಸಂಘಟನೆಯು ವಿಧ್ಯಾಭ್ಯಾಸಕ್ಕಾಗಿ ಬಹು ಮುಖ್ಯವಾದ ಗಮನವನ್ನು ನೀಡುತ್ತಿದೆ. ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು, ವಿಧ್ಯಾಭ್ಯಾಸದ ಕುರಿತಾದ ಜಾಗೃತಿ, ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಹಾಗೂ ಸದರಿ ವರ್ಷ ಸಂಘಟನೆಯು ದೇಶದಾದ್ಯಂತ ವಿಧ್ಯಾಭ್ಯಾಸದ ಕುರಿತಾಗಿ ವ್ಯಯಿಸಿದ ಹಲವಾರು ಅಂಕಿ ಅಂಶಗಳನ್ನು ಸಭಿಕರ ಮುಂದಿಟ್ಟರು.

ವೇದಿಕೆಯಲ್ಲಿ ಅಯಾಝ್ ಕೃಷ್ಣಾಪುರ ಕಾರ್ಪೋರೇಟರ್ ಮಂಗಳೂರು,ನಾಸಿರ್ ತುಂಬೆ ಸಮುದಾಯ ಅಭಿವೃದ್ಧಿ ಘಟಕ ರಾಜ್ಯ ನಿರ್ದೇಶಕರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಹನೀಫ್ ಕಾಟಿಪಳ್ಳ ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಸ್ವಾಗತಿಸಿ ಕೊನೆಯಲ್ಲಿ ಸಿರಾಜ್ ಕಾವೂರು ಕಾರ್ಯದರ್ಶಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಂದಿಸಿದರು

