ಬಂಟ್ವಾಳ: ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಜೀರ್ಣೋದ್ಧಾರ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಐದು ಲಕ್ಷ ರೂಪಾಯಿ ಬಂದಿರುತ್ತದೆ. ಈ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ ಕ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನಿಲ್ಯಾಡಿ ಇವರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಸುನಿತಾ ನಾಯಕ್, ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ, ಸೇವಾ ಪ್ರತಿನಿಧಿ ಯಶೋದ, ಒಕ್ಕೂಟದ ಅಧ್ಯಕ್ಷ ನಾರಾಯಣ, ಮಾಜಿ ವಲಯಾಧ್ಯಕ್ಷ ಹರೀಶ ಎಸ್ ಪಿ, ದೇವಸ್ಥಾನದ ಜೀರ್ಣೋದ್ಧಾ ಸಮಿತಿ ಅಧ್ಯಕ್ಷರು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
