ಫರೀದಾಬಾದ್: ಇಪ್ಪತ್ತು ವರ್ಷದ ಮಹಿಳೆಯ ಮೇಲೆ ಆಕೆಯ ಸೋದರ ಸಂಬಂಧಿ ಸಹಿತ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಮಹಿಳೆಗೆ ಮತ್ತು ಬರಿಸುವ ಪದಾರ್ಥವನ್ನು ಬೆರೆಸಲಾದ ತಂಪು ಪಾನೀಯವನ್ನು ನೀಡಿ ಗ್ಯಾಂಗ್ ರೇಪ್ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಆರ್ಯ ನಗರ ವಲ್ಲಭ ನಗರದ ನಿವಾಸಿಯಾಗಿರುವ ಮಹಿಳೆಯು ಮಂಗಳವಾರ ಮನೆಗೆ ಅಗತ್ಯ ವಸ್ತುಗಳನ್ನು ತರಲು ಮಾರುಕಟ್ಟೆಗೆ ಹೋಗಿದ್ದಳು. ಅಲ್ಲಿ ಆಕೆಯ ಸೋದರ ಸಂಬಧಿ ಭೂಪೇಂದ್ರ ಎಂಬಾತ ಆಕೆಗೆ ಎದುರಾಗಿ ತನ್ನೊಂದಿಗೆ ತಂಪು ಪಾನೀಯ ಸೇವಿಸಲು ಬರುವಂತೆ ಕೋರಿಕೊಂಡ. ಅದಕ್ಕೆ ಆಕೆ ನಿರಾಕರಿಸಿದಳು.
ಆದರೂ ಕೊನೆಗೆ ಆತನ ಒತ್ತಾಯಕ್ಕೆ ಮಣಿದು ಆಕೆ ಆತನೊಂದಿಗೆ ಹೋದಳು. ಅಲ್ಲಿ ಆತ ಮತ್ತು ಬರುವ ಪದಾರ್ಥವನ್ನು ಬೆರೆಸಿ ಆಕೆಗೆ ತಂಪು ಪಾನೀಯ ನೀಡಿದ. ಅದನ್ನು ಕುಡಿದ ಸ್ಮತಿ ಕಳೆದುಕೊಂಡ ಆಕೆಯನ್ನು ಆತ ಕಾರಿನಲ್ಲಿ ಹಾಕಿ ಹೊಟೇಲಿಗೆ ಒಯ್ದ. ಅಲ್ಲಿ ಮೋತಿ ಮತ್ತು ದೀಪು ಎಂಬ ಆತನ ಇನ್ನಿಬ್ಬರು ಸ್ನೇಹಿತರು ಜತೆಗೂಡಿ ಹೊಟೇಲ್ ಕೋಣೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದರು.
ಮಹಿಳೆ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಅತ್ಯಾಚಾರಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ವ್ಯಾಪಕ ಶೋಧ ನಡೆದಿದೆ.
