ಬಂಟ್ವಾಳ: ಬಂಟ್ವಾಳ ಪೇಟೆ ಕಳೆದ ಹಲವು ವರ್ಷಗಳಿಂದಲೂ ಕಿಷ್ಕಿಂದೆಯಂತೆ ಕಿರಿದಾಗಿ ವಾಹನ ಮತ್ತು ಜನ ಸಂಚಾರಕ್ಕೆ ಬಾರೀ ಅಡ್ಡಿಯಾಗುತ್ತಿರುವ ಬಗ್ಗೆ ಇಲ್ಲಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದು, ಈಚೆಗೆ ಜಿಲ್ಲಾಧಿಕಾರಿ ಡಾ.ಜಗದೀಶ್ ಭೇಟಿ ನೀಡಿ ಇಲ್ಲಿನ ರಸ್ತೆ ವಿಸ್ತರಣೆಗೆ ಸರ್ವೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಇದರಿಂದಾಗಿ ಮಂಗಳೂರು ಸಹಾಯಕ ಕಮಿಷನರ್ ಎ.ಸಿ.ರೇಣುಕಾಪ್ರಸಾದ್ ಉಪಸ್ಥಿತಿಯಲ್ಲಿ ಶನಿವಾರ ಸಂಜೆ ಪುರಸಭೆಯಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖಾಧಿಕಾರಿಗಳು ಮತ್ತು ಬಂಟ್ವಾಳ ವರ್ತಕರೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ವಿವಿಧ ಮೂಲಭೂತ ಸೌಕರ್ಯ ಒದಗಿಸುವಂತೆ ವರ್ತಕರಿಂದ ಆಗ್ರಹ ವ್ಯಕ್ತವಾಯಿತು.

4

3
6

ಬಂಟ್ವಾಳ ವರ್ತಕರ ಸಂಘದ ಅಧ್ಯಕ್ಷ, ಸ್ವರ್ಣೋದ್ಯಮಿ ಸುರೇಶ ಬಿ.ಬಾಳಿಗಾ ಮಾತನಾಡಿ, ಬಂಟ್ವಾಳ ಪೇಟೆ ವಿಸ್ತರಣೆಗೆ ಮೊದಲು ಇಲ್ಲಿನ ನಾಗರಿಕರಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿದರು. ಬಂಟ್ವಾಳ ಪೇಟೆ ವಿಸ್ತರಣೆಗೊಳಿಸುವುದಕ್ಕೆ ನಮ್ಮೆಲ್ಲರ ಸಹಮತ ಇದ್ದರೂ ಆರಂಭದಲ್ಲಿ ವೈಜ್ಷಾನಿಕ ಮತ್ತು ಪಾರದರ್ಶಕ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಬೇಕು. ಈಗಾಗಲೇ ಬಂಟ್ವಾಳ ಪೇಟೆ ಉಳಿಸುವುದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಬಂಟ್ವಾಳ ಬೈಪಾಸ್ ರಸ್ತೆ ನಿರ್ಮಿಸಲಾಗಿದ್ದು, ಬಂಟ್ವಾಳ ಪೇಟೆಯಲ್ಲಿ ಫುಟ್‍ಪಾತ್ ಅತಿಕ್ರಮಿಸಿಕೊಂಡಿರುವ ಅಂಗಡಿಗಳನ್ನು ಮೊದಲು ತೆರವುಗೊಳಿಸಬೇಕು. ಅಂಗಡಿ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು. ಇದೇ ವೇಳೆ ವರ್ತಕರ ನಡುವೆಯೇ ಪರಸ್ಪರ ಮಾತಿನ ಚಕಮಕಿ ಮತ್ತು ವಾಗ್ವಾದ ಉಂಟಾಯಿತು.

11

13

9

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ ಮಾತನಾಡಿ, ಬಂಟ್ವಾಳ ಪೇಟೆಯನ್ನು ವಿಸ್ತರಿಸುವ ಬದಲಾಗಿ ಪೇಟೆಯನ್ನು ಯಥಾವತ್ತಾಗಿ ಉಳಿಸುವುದು ಸೂಕ್ತ ಎಂದರು. ಅಂತಿಮವಾಗಿ ಪೇಟೆ ವಿಸ್ತರಣೆಗೆ ಇಲ್ಲಿನ ವರ್ತಕರ ಸಂಘ ಮತ್ತು ಕೆಲವೊಂದು ಜನ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಯಾವುದೇ ನಿರ್ಣಯ ಕೈಗೊಳ್ಳಲು ಸಭೆ ವಿಫಲವಾಯಿತು.

14

15

ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಯೋಜನಾ ನಿರ್ದೇಶಕ ಪ್ರಸನ್ನ, ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಜಲಮಂಡಳಿ ಎಂಜಿನಿಯರ್ ಶೋಭಲತಾ, ಮೆಸ್ಕಾಂ ಸಮಿತಿ ನಿರ್ದೇಶಕ ವೆಂಕಪ್ಪ ಪೂಜಾರಿ, ಪುರಸಭಾ ಸದಸ್ಯ ಪ್ರವೀಣ್ ಬಿ., ನಾಮನಿರ್ದೇಶಿತ ಸದಸ್ಯ ಪ್ರವೀಣ್ ಕಿಣಿ ಪ್ರಮುಖರಾದ ಪ್ರಕಾಶ್ ಅಂಚನ್, ವಿಶ್ವನಾಥ ಚೆಂಡ್ತಿಮಾರ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *