ಬಂಟ್ವಾಳ: ಅಕ್ರಮ ಮರಳು ಸಾಗಾಟದ ಶಂಕೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಖುದ್ದು ರಸ್ತೆಯಲ್ಲಿ ನಿಂತು ಮರಳು ಸಾಗಾಟದ 33 ಲಾರಿಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ಬಿ.ಸಿ.ರೋಡಿನಲ್ಲಿ ನಡೆದಿದೆ.
ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಟ್ರಾಪಿಕ್ ಜಾಮ್, ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬುಧವಾರ ಬಿ.ಸಿ.ರೋಡಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಮರಳು ಹೇರಿಕೊಂಡು ಬರುತ್ತಿದ್ದ ಲಾರಿಗಳನ್ನು ಅನುಮಾನದಿಂದ ತಡೆದು ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ಬಂಟ್ವಾಳ ತಹಶೀಲ್ದಾರರ ವಶಕ್ಕೆ ಒಪ್ಪಿಸಿದರು.
ಜಿಲ್ಲಾಧಿಕಾರಿಯವರು ಸುಮಾರು 15 ಲಾರಿಗಳನ್ನು ಖುದ್ದು ವಶಪಡಿಸಿದರೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಉಳಿದ 18 ಲಾರಿಗಳನ್ನು ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಚರಣೆ ನಡೆಸಿ ವಶಪಡಿಸಿದರು. ಈ ವೇಳೆ ಜಿಲ್ಲಾ ಎಸ್.ಪಿ. ಡಾ.ಶರಣಪ್ಪ , ಪ್ರಾದೇಶಿಕ ಸಾರಿಗೆ ಅಧಿಕಾರಿ ಅಜ್ಮಲ್ ಅಹಮದ್ಖಾನ್, ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿ ನಾಗೇಂದ್ರ, ಬಂಟ್ವಾಳ ಸಿ.ಐ ಬೆಳಿಯಪ್ಪ,ಎಸೈ ನಂದಕುಮಾರ್ ಕಾಯರ್ಾಚರಣೆಗೆ ಸಾಥ್ ನೀಡಿದ್ದರು.

6 (5)
20 ಲಾರಿಗಳಿಗೆ ಪರವಾನಿಗೆ ಇತ್ತು:ವಶಪಡಿಸಿಕೊಳ್ಳಲಾದ 33 ಲಾರಿಗಳ ಪೈಕಿ 20 ಲಾರಿಗಳು ಮರಳು ಸಾಗಾಟದ ಪರವಾನಿಗೆಯನ್ನು ಹೊಂದಿದ್ದು ಉಳಿದ 13 ಲಾರಿಗಳಲ್ಲಿ ಪ್ರಮಾಣಕ್ಕಿಂತ ಅಧಿಕವಾಗಿ ಮರಳು ತುಂಬಿಸಲಾಗಿದ್ದು ಅವುಗಳಿಗೆ ದಂಡನೆ ಹಾಕಲಾಗಿದೆಯೆಂದು ತಹಶೀಲ್ದಾರ್ ಮಲ್ಲೇಸ್ವಾಮಿ ತಿಳಿಸಿದ್ದಾರೆ.ಈ ಮರಳುಗಳನ್ನು ಅಡ್ಯಾರ್,ಅಡ್ಡೂರು,ಫರಂಗಿಪೇಟೆ ಮೊದಲಾದೆಡೆಯಿಂದ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *