ಮೂಡುಬಿದಿರೆ: ಕಳೆದ ವರ್ಷ ಜ.2ರಂದು ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ಬಡಗೆಡಪದವು ಗ್ರಾಮದ ಮಿಜಾರು ನಂದಾಡಿ ದಿ. ಈಶ್ವರ ಪೂಜಾರಿ ಅವರ ಪುತ್ರ ಗಿರೀಶ್ ಪೂಜಾರಿ ಅವರ ಸ್ಮರಣಾರ್ಥ ಊರ ಅಭಿಮಾನಿಗಳು ಒಟ್ಟಾಗಿ ಮಿಜಾರು ಉರ್ಕಿಯಲ್ಲಿ ನಿರ್ಮಿಸಿದ ಶಾಶ್ವತ ವೃತ್ತವನ್ನು ಗಿರೀಶ್ ಅವರ ತಾಯಿ ಮೋಹಿನಿ ಅವರು ರವಿವಾರ ಸಂಜೆ ಉದ್ಘಾಟಿಸಿದರು.

iruvail

ಜಿ.ಪಂ. ಸದಸ್ಯ ಜನಾರ್ದನ ಗೌಡ, ಮಾಜಿ ಯೋಧ ಮಿಜಾರುಗುತ್ತು ಭಗವಾನ್‍ದಾಸ್ ಶೆಟ್ಟಿ , ವಕೀಲ ಶಾಂತಿಪ್ರಸಾದ್ ಹೆಗ್ಡೆ, ಸಮಾಜ ಸೇವಕರಾದ ಸುಧಾಕರ ಪೂಂಜ, ಸುದರ್ಶನ ಪೂಂಜ, ರಂಜಿತ್ ಪೂಜಾರಿ ಸಹಿತ ಊರ ಪ್ರಮುಖರು, ಗಿರೀಶ್ ಪೂಜಾರಿ ಅವರ ಅಭಿಮಾನಿಗಳು, ಗಿರೀಶ್ ಪತ್ನಿ ರೇಖಾ, ಆಕೆಯ ತಂದೆ ಶೇಖರ ಪೂಜಾರಿ ಪಾಲ್ಗೊಂಡಿದ್ದರು.

ಲಭಿಸದ ಉದ್ಯೋಗ:
ಪಿ.ಯು. ಓದಿನ ಬಳಿಕ ಉದ್ಯೋಗಕ್ಕಾಗಿ ಹೈದರಾಬಾದಿಗೆ ತೆರಳಿದ್ದ ಗಿರೀಶ್ ಅವರು ಅಲ್ಲಿ ಭೂಸೇನೆಗೆ ಆಯ್ಕೆಯಾಗಿ 14 ವರ್ಷಗಳ ಕಾಲ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉತ್ತರಾಂಚಲ, ಡೆಹ್ರಾಡೂನ್, ಜಮ್ಮು, ಕೋಲ್ಕತ್ತ, ಹೊಸದಿಲ್ಲಿ ಇಲ್ಲೆಲ್ಲ ಸೇವೆ ಸಲ್ಲಿಸಿ ರಾಜಸ್ತಾನದ ಗಂಗಾನಗರದಲ್ಲಿ ಕರ್ತವ್ಯದಲ್ಲಿರುವಾಗಲೇ ಅಕಸ್ಮಾತ್ ನಿಧನ ಹೊಂದಿದ್ದರು. ಗಿರೀಶ್ ಪತ್ನಿ ರೇಖಾ ಬಿ.ಎಡ್. ಪದವೀಧರೆ. ಜತೆಗೆ ಈಗ ಐದರ ಹರೆಯದಲ್ಲಿರುವ ಮಗು ಗಗನ್ ಇದ್ದಾನೆ. ಬಡತನದಲ್ಲಿರುವ ಈ ಕುಟುಂಬದ ಜೀವನ ಸುಗಮವಾಗಿ ಸಾಗಲು ರೇಖಾ ಅವರಿಗೆ ನೌಕರಿ ಬೇಕಾಗಿದೆ. ಹಾಗೆಂದು ಸಿಕಂದರಾಬಾದ್‍ನ ಸೇನಾ ಕಚೇರಿಗೆ ಆಕೆ ಕಳೆದ ವರ್ಷವೇ ಅರ್ಜಿ ಸಲ್ಲಿಸಿಯೂ ಆಗಿದೆ. ಇನ್ನೂ ಯಾವುದೇ ಪ್ರತಿಕ್ರಿಯೆ ಇಲ್ಲ.

ಈ ಬಗ್ಗೆ ಉದ್ಘಾಟನಾ ಸಂದರ್ಭ ಪ್ರಸ್ತಾಪಿಸಿದ ಮಿಜಾರು ಸುಧಾಕರ ಪೂಂಜಾ ಅವರು , ` ಈ ದೇಶದಲ್ಲಿ ದನ ಕೊಂದವರಿಗೆ ರಾಜಕೀಯದವರು, ಸರಕಾರ ರೂ. 10 ಲಕ್ಷ ದಷ್ಟು ಪರಿಹಾರ ಧನ ಘೋಷಿಸುವ ಉತ್ಸಾಹ ತೋರುತ್ತದೆ. ಆದರೆ ದೇಶ ಕಾಯುವ ಕಾಯಕ ನಡೆಸುವ ಸೈನಿಕರು ಮೃತಪಟ್ಟರೆ ಅವರ ಅವಲಂಬಿತರಿಗೆ ಉದ್ಯೋಗ ಕೊಡಿಸಲು ವರ್ಷ ಉರುಳಿದರೂ ಯಾರೂ ಮುತುವರ್ಜಿ ತೋರುವುದಿಲ್ಲ. ಇದೊಂದು ದುರಂತ. ಸೇನೆ ಕೆಲಸ ನೀಡುವವರೆಗಾದರೂ ಕನಿಷ್ಟ ಜಿಲ್ಲಾಡಳಿತೆ ಮನಸ್ಸು ಮಾಡಬೇಕಾಗಿದೆ’ ಎಂದು ಹೇಳಿದರು.

By suddi9

Leave a Reply

Your email address will not be published. Required fields are marked *