ಬಂಟ್ವಾಳ: ಸಜೀಪಮೂಡ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ಸಜೀಪಮೂಡ ತೆಂಗು ಬೆಳೆಗಾರರ ಸೊಸೈಟಿಯನ್ನು ಮಂಗಳೂರು ತೆಂಗು ಬೆಳೆಗಾರರ ಪೆಡರೇಶನ್ ಆಶ್ರಯದಲ್ಲಿ ಪೆಡರೇಶನ್ ಅಧ್ಯಕ್ಷ ,ಪ್ರಗತಿ ಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಿದರು.
ಯಶವಂತ ದೇರಾಜೆಗುತ್ತು,ರಾಜ್ಯ ರೈತರ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ,ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯಭಟ್, ಕಾರ್ಯದರ್ಶಿ ಇದಿನಬ್ಬ ,ತಾಲೂಕು ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್,ಕಾರ್ಯದರ್ಶಿ ಸುದೇಶ ಮಯ್ಯ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ತುಳುನಾಡ ಕೃಷಿ ಕ್ರಾಂತಿ ಅಂಗವಾಗಿ ಸಜೀಪ ಮುನ್ನೂರಿನ 6 ಎಕರೆ ಪ್ರದೇಶದಲ್ಲಿ ಬೆಳೆಸಲಾದ ಭತ್ತ ಹಾಗೂ ದ್ವಿದಳ ಧಾನ್ಯ ಕೃಷಿಯನ್ನು ವೀಕ್ಷಿಸಿ ಕೃಷಿಯಲ್ಲಾದ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಲಾಯಿತು.
ಕರುಣಾಕರ ಶೆಟ್ಟಿ ,ವಾಸುಗಟ್ಟಿ,ಸೀತಾರಾಮ ಶೆಟ್ಟಿ,ಲಿಂಗಪ್ಪ ದೋಟ,ನಂದರಾಮ ರೈ,ನರೇಂದ್ರ ಆಳ್ವ ರಾಮ,ದೇವಪ್ಪ ಮಡಿವಾಳ,ಸಂದೇಶ ಗಟ್ಟಿ,ಸೀತಾರಾಮ ನಾಯಕ್,ಪರಮೇಶ್ವರ ನಾಯಕ್,ಸತೀಶ್ ಆಚಾರ್ಯ,ಕಿರಣ್ ಕುಮಾರ್,ಜಯ ಕುಲಾಲ್ ಉಪಸ್ಥಿತರಿದ್ದರು.