ಮಂಗಳೂರು:ಪದವಿನಂಗಡಿ ದೇವಿನಗರ ಶ್ರೀ ದುರ್ಗಾಕಟ್ಟೆಯ ಹತ್ತಿರ ಪಾದಾಚಾರಿಗಳಿಗೆ ಮಾರ್ಗದಾಟಲು ಸಮರ್ಪಕವಾಗಿ ಗುರುತುಗಳನ್ನು ಹಾಗೂ ಇನ್ನಿತ್ತರ ಸ್ಥಳಗಳಲ್ಲಿ ಸ್ಪೀಡ್ ಬ್ರೇಕ್‍ರ್ ಅಳವಡಿಸುವ ಬಗ್ಗೆ ದ.ಕ.ಜಿಲ್ಲಾ ಸ್ಲಂ ಮೋರ್ಚಾ ತಂಡದಿಂದ ಪೊಲೀಸ್ ಕಮೀಷನರ್ ಎಮ್ ಚಂದ್ರಶೇಖರ್ ಗೆ ಮನವಿ ನೀಡಲಾಯಿತು.ಮಂಗಳೂರು ನಗರದ ಯೆಯ್ಯಾಡಿ ಶ್ರೀ ಜಯರಾಮ ಭಜನಾ ಮಂದಿರ, ಪದವಿನಂಗಡಿ ದೇವಿನಗರ ಶ್ರೀ ದುರ್ಗಾಕಟ್ಟೆ ಬಳಿ ಮತ್ತು ಬೋಂದೆಲ್ ಚರ್ಚ್ ಬಳಿ ಪಚ್ಚನಾಡಿ ವಾಮಂಜೂರು ರಸ್ತೆ ಸಂಪರ್ಕಿಸುವ ಮಾರ್ಗವು ಮಂಗಳೂರು ವಿಮಾನ ನಿಲ್ದಾಣದ ರಸ್ತೆಯಾಗಿದ್ದು ಕೇರಳದ ಕಡೆಗಳಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುವುದರಿಂದ ಪಾದಚಾರಿಗಳಿಗೆ ತುಂಬಾ ಕಷ್ಟಕರವಾಗಿರುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ಪೊಲೀಸ್ ಕಮೀಷನರ್ ಗೆ ಮನವಿ ಸಲ್ಲಿಸಲಾಯಿತು.

IMG-20170211-WA0015ಈ ಸಂದರ್ಭದಲ್ಲಿ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ರಾಮ ಅಮೀನ್ ಪಚ್ಚನಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು, ಚೇತನ್ ಪೂಜಾರಿ, ಉಪಾಧ್ಯಕ್ಷರಾದ ಮುರಳೀಧರ ಬೋಳಾರ, ಕಾರ್ಯದರ್ಶಿ ಸುನೀತ ಶಕ್ತಿನಗರ, ದಕ್ಷಿಣ ಮಂಡಲದ ಸ್ಲಂ ಅಧ್ಯಕ್ಷ ಪ್ರವೀಣ್ ಕೋಡಿಯಲ್ ಬೈಲ್ ಮತ್ತಿತ್ತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *