ಸಂಗಬೆಟ್ಟು: ಕಂದಾಯ ಇಲಾಖೆ ವತಿಯಿಂದ ಕಂದಾಯ ಅದಾಲತ್ನಿಂದಾಗಿ ರೈತರು ತಮ್ಮ ಪಹಣಿಗಳಲ್ಲಿ ಇರುವ ವಿವಿಧ ತಿದ್ದುಪಡಿ ಮತ್ತಿತರ ದೋಷಗಳನ್ನು ಸ್ಥಳದಲ್ಲಿಯೇ ಇತ್ಯರ್ಥವಾಗುವುದರಿಂದ ರೈತರು ತಾಲೂಕು ಕಚೇರಿ, ಜಿಲ್ಲಾ ಕಚೇರಿಗೆ ಅಳೆದಾಡುವ ಪ್ರಸಂಗವಿರುವುದಿಲ್ಲ ಎಂದು ಮಂಗಳೂರು ಸಹಾಯಕ ಕಮಿಷನರ್ ಡಾ|| ಪ್ರಶಾಂತ್ ತಿಳಿಸಿದರು.
ಅವರು ದಿನಾಂಕ : 10-07-2014ರಂದು ಸಂಗಬೆಟ್ಟು ಗ್ರಾಮ ಪಂಚಾಯತ್ನಲ್ಲಿ ನಡೆದ ಕಂದಾಯ ಅದಾಲತ್ನಲ್ಲಿ ಸಂಗಬೆಟ್ಟು & ಕಪರ್ೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಬಂಟ್ವಾಳ ತಾಲೂಕು ತಹಶೀಲ್ದಾರ್ ಮಲ್ಲೇಸ್ವಾಮಿ ಮಾತಾಡಿ ಪಹಣಿ ಪತ್ರಿಕೆ (ಆರ್.ಟಿ.ಸಿ) ಅಗತ್ಯತೆ ಮತ್ತು ಮಹತ್ವದ ಬಗ್ಗೆ ಮಾತನಾಡಿದರು. ಸ್ಥಳದಲ್ಲಿ ಹಲವಾರು ಮಂದಿ ರೈತರ ಪಹಣಿಗಳಲ್ಲಿನ ಲೋಪ ದೋಷ ಸರಿಪಡಿಸಿ ಆದೇಶಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ಸುಶೀಲಾ, ಜಿ.ಪಂ. ಸದಸ್ಯ ನಳಿನಿ ಬಿ.ಶೆಟ್ಟಿ, ತಾ.ಪಂ. ಸದಸ್ಯ ರೇವತಿ ಆರ್.ಪೂಜಾರಿ, ಪಂಚಾಯತ್ ಉಪಾಧ್ಯಕ್ಷ ಜಲಜ ಹೆಚ್.ಪೂಜಾರಿ ಉಪಸ್ಥಿತರಿದ್ದರು. ಬಂಟ್ವಾಳ ಕಂದಾಯ ನಿರೀಕ್ಷಕ ಸಾಧು ಸ್ವಾಗತಿಸಿದರು. ಗ್ರಾಮ ಕರಣಿಕ ಶಿವಾನಂದ ನಾಟೆಕರ್, ಕಂದಾಯ ಇಲಾಖೆಯ ವಂದನಾ, ದಿವಾಕರ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು, ಸದಸ್ಯರಾದ ಸತೀಶ್, ಹೆಚ್.ಉಮ್ಮರ್ ಫಾರೂಕ್, ಮಾಧವ, ವಾಣಿ, ಬೆನೆಡಿಕ್ಟಾ ಡಿ`ಕೋಸ್ತ, ಶ್ರೀಧರ ಎಸ್.ಪಿ. ಉಪಸ್ಥಿತರಿದ್ದರು

