ಬಂಟ್ವಾಳ : ಪುರಸಭೆ ಹಾಗೂ ನಿರ್ಮಲ ಬಂಟ್ವಾಳ ಕಾರ್ಯಕ್ರಮದಡಿಯಲ್ಲಿ ಮಾಹಿತಿ ಕಾರ್ಯಕ್ರಮ ಮತ್ತು 300 ಬಕೆಟ್ ವಿತರಣೆ ಬಿ.ಮೂಡ ಪರ್ಲಿಯಾ ವಾರ್ಡ್ ನಂ.14 ರಲ್ಲಿ ಜರಗಿತು. ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಕಂದಾಯ ನಿರೀಕ್ಷಕ ಪುರುಷೋತ್ತಮ, ಸಮುದಾಯ ಸಂಘಟನಾಧಿಕಾರಿ ಮತ್ತಡಿ, ಸಿಬ್ಬಂದಿಗಳಾದ ರಾಘವೇಂದ್ರ, ಜಯಶ್ರೀ, ರಮಣಿ, ತಪಸ್ವಿನಿ, ಪ್ರವೀಣ ಹಾಗೂ ಪರ್ಲಿಯಾ ಅರಾಫಾ ಮಸೀದಿ ಅಧ್ಯಕ್ಷ ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
