ಬಂಟ್ವಾಳ: ಪೆರಾಜೆ ಶ್ರೀಗುಡ್ಡಚಾಮುಂಡೇಶ್ವರೀ ದೈವದ ವಾರ್ಷಿಕ ಜಾತ್ರಾ ಉತ್ಸವ ಆದಿತ್ಯವಾರ ವಿಜೃಂಭಣೆಯಿಂದ ನಡೆಯಿತು. ಫೆ.27ರಂದು ಈ ಜಾತ್ರಾ ಮಹೋತ್ಸವದ ಅಂಗವಾಗಿ ಗೊನೆ ಕಡಿದು ಮಾ.4 ರಂದು ಭಂಡಾರವೇರಿ ಮಾರಿ ಪೂಜೆ ನಡೆದು ಆದಿತ್ಯವಾರ ರಾತ್ರಿ ಸಾವಿರಾರು ಭಕ್ತರ ಸಮ್ಮಖದಲ್ಲಿ ಶ್ರೀಗುಡ್ಡಚಾಮುಂಡೇಶ್ವರೀ ದೈವಕ್ಕೆ ನೇಮ ಜರಗಿತು. ವಿಶೇಷ ಸುಡುಮದ್ದು ಪ್ರದರ್ಶನ ಕೂಡಾ ನಡೆಯಿತು.


