ಬಂಟ್ವಾಳ:  ಮೂಲ ಸೌಕರ್ಯ ಒದಗಿಸುವುದು ನನ್ನ ಕರ್ತವ್ಯ, ಊರವರ ಸಹಕಾರ ಮತ್ತು ಸೌಹಾರ್ದತೆ ಯಿಂದ ಕಾಮಗಾರಿ ಸಮಯಕ್ಕೆ ಸರಿಯಾಗಿ ಪೂರ್ಣ ಗೊಂಡಿತು . ಮುಂದಿನ ದಿನಗಳಲ್ಲಿ ಪುದು ಗ್ರಾಮ ಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯಸ್ಥೆ ಯನ್ನು ಮಾಡಿ ನೇತ್ರಾವತಿ ನದಿ ತೀರದ ತುಂಬೆ ಮತ್ತು ಪುದು ಗ್ರಾಮ ಗಳಿಗೆ ಯಾವುದೇ ತೊಂದರೆ ಗಳಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಪುದು ಗ್ರಾಮ ದ ಮಾರಿಪಳ್ಳ ದಿಂದ ಸುಜೀರು ದತ್ತನಗರದ ವರೆಗೆ ಪೂರ್ತಿ ಹದಗೆಟ್ಟ ರಸ್ತೆ ಯನ್ನು ಸುಮಾರು ೮ ಲಕ್ಷ ರೂಪಾಯಿಗಳ ಅನುದಾನದಿಂದ ಡಾಮರೀಕರಣ ಗೊಂಡ ರಸ್ತೆ ಯನ್ನು ಉದ್ಘಾಟನೆ ಗೊಳಿಸಿ ಪುದು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ ಮಾತನಾಡಿದರು.

IMG_5519_resize
ಸುಮಾರು ಹತ್ತು ವರ್ಷ ಗಳಿಂದ ಹದಗೆಟ್ಟಿದ್ದ ಈ ರಸ್ತೆ ಯನ್ನು ಅಗಲ ಗೊಳಿಸಿ ಡಾಮರೀಕರಣ ಗೊಳಿಸಿದ ಜಿಲ್ಲಾ ಪಂಚಾಯತ್ ಸದಸ್ಯರ ಕಾರ್ಯವೈಖರಿ ಗೆ ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸಿದರು , ಸುಜೀರು ಮಲ್ಲಿ ಹೈದ್ರೋಸಿಯ ಜುಮ್ಮಾ ಮಸೀದಿ ಯ ಮತ್ತು ಶ್ರೀ ವೀರ ಹನುಮಾನ್ ಮಂದಿರದ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು
ಶ್ರೀ ವೀರ ಹನುಮಾನ್ ಮಂದಿರದ ಗೌರವಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ನುಲಿಯಲ್ ಗುತ್ತು ಊರವರ ಪರವಾಗಿ ಜಿಲ್ಲಾ ಪಂಚಾಯತ್ ಸದಸ್ಯ ರನ್ನು ಅಭಿನಂದಿಸಿ ಮಾತನಾಡಿದರು
ಸುಬ್ರಮಣ್ಯ ರಾವ್ , ಮಂಗಳೂರು ಮಂಡಲ ಬಿ ಜೆ ಪಿ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು , ಬಿ ಜೆ ಪಿ ಪುದು ಶಕ್ತಿ ಕೇಂದ್ರ ದ ಪ್ರದಾನ ಕಾರ್ಯದರ್ಶಿ ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ , ಹೈದ್ರೋಸಿಯ ಜುಮ್ಮಾ ಮಸೀದಿ ಯ ಅಧ್ಯಕ್ಷ ರಾದ ಇಬ್ರಾಹಿಂ ಮೋನು , ಉಪಾದ್ಯಕ್ಶರುಗಳಾದ ಕೆ ಕೆ . ಖಾದರ್ , ಅಬ್ದುಲ್ ರಜಾಕ್ , ಪಂಚಾಯತ್ ಸದಸ್ಯ ರುಗಳಾದ ಮಾಲತಿ ಶೆಟ್ಟಿ , ಜಾನಕೀ ಸುಜೀರು , ಗಣೇಶ್ ದತ್ತನಗರ , ಗ್ರಾಮಸ್ಥರು ಗಳಾದ ಜಯ ಬೆಲ್ಚಡ , ಪ್ರತಾಪ ಆಳ್ವ ಸುಜೀರು ಗುತ್ತು , ಅಬ್ದುಲ್ ರಝಕ್ , ಎಸ್ ಇಬ್ರಾಹಿಂ , ಎಂ ಪುತ್ತ ಅಬೂಬಕ್ಕರ್ ಸಿದ್ದಿಕ್ , ರಿಯಾಜ್ , ಸಾದಿಕ್ , ಪ್ರದೀಪ್ ಸುಜೀರು ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *