ಬಂಟ್ವಾಳ: ಉತ್ತರಪ್ರದೇಶ ಮತ್ತು ಉತ್ತರಖಂಡ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಅಭೂತಪೂರ್ವ ಗೆಲುವಿಗೆ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಬಿ.ಸಿ.ರೋಡ್‍ನಲ್ಲಿ ವಿಜಯೋತ್ಸವನ್ನು ಆಚರಿಸಲಾಯಿತು. ನೂರಾರು ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಿಹಿತಿಂಡಿ ಹಚ್ಚಿ ಸಂಭ್ರಮ ಆಚರಿಸಿದರು.

ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ,ಬಿಜೆಪಿ ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನ ಜಿ.ಕೆ.ಭಟ್, ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಸುಗುಣ ಕಿಣಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಉದಯಕುಮಾರ್ ರಾವ್, ಬಿ.ದಿನೇಶ್ ಭಂಡಾರಿ ,ಎ.ಗೋವಿಂದ ಪ್ರಭು, ರಮನಾಥ ರಾಯಿ,ಸೀತಾರಾಮ ಪೂಜಾರಿ,ವಜ್ರನಾಥ ಕಲ್ಲಡ್ಕ, ರೋನಾಲ್ಡ್ ಡಿಸೋಜ, ಜಗದೀಶ ಭಂಡಾರಿ, ಗಣೇಶ್‍ದಾಸ್ ,ಮಹಾಬಲ ಶೆಟ್ಟಿ,ಕಮಲಾಕ್ಷಿ ಕೆ ಪೂಜಾರಿ, ಜಯಂತಿ ವೀರಕಂಭ, ಅಬ್ದುಲ್ ರಜಾಕ್, ಖಲೀಲ್ ಬಿ.ಸಿ.ರೋಡ್, ಇಸೂಬ್ ಲೊರೆಟ್ಟೋಪದವು, ಹರೀಶ್ ಶೆಟ್ಟಿ ಪಡು, ಹರೀಶ್ ಆಚಾರ್ಯ, ವಿಜಯ ರೈ, ಪುರುಷೋತ್ತಮ ಶೆಟ್ಟಿ , ಕಿಶೋರ್ ಶೆಟ್ಟಿ, ಸುರೇಶ್ ಕೋಟ್ಯಾ ನ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
