ಬಂಟ್ವಾಳ : ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ 11 ವಿೂ. ಎತ್ತರದ ನೂತನ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ ಜಿಲ್ಲಾಡಳಿತ ಮತ್ತು ಮ.ನ.ಪಾ ದಿಂದ ಜಲಾವೃತದಿಂದ ನಷ್ಟಕ್ಕೊಳಗಾದ ರೈತರಿಗೆ ನ್ಯಾಯೋಚಿತ ಸೂಕ್ತ ಪರಿಹಾರ ದೊರೆಯದ ಹಿನ್ನಲೆಯಲ್ಲಿ ರಾಜ್ಯ ಉಚ್ಚನ್ಯಾಯಲಾಯದಲ್ಲಿ ದಾವೆ ಹೂಡಿ ರೈತರ ಸಮಕ್ಷಮ ಮರು ಸರ್ವೆ ನಡೆಸಿ ಮುಳುಗಡೆ ಜವಿೂನಿನ ಸಂಪೂರ್ಣ ಮಾಹಿತಿ ನೀಡಿ ಒಂದು ತಿಂಗಳೊಳಗೆ ಭೂ ಪರಿಹಾರವನ್ನು ನೀಡಬೇಕೆಂದು ಸ್ಪಷ್ಟ ಅದೇಶ ನೀಡಿದ್ದರೂ ಹೈಕೋರ್ಟು ಆದೇಶ ಜಾರಿಯಾಗದೆ ಇರುವುದರಿಂದ ಮುಂದಿನ ಕಾನೂನು ಹೋರಾಟದ ಬಗ್ಗೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲು ಹೈಕೋರ್ಟು ವಕೀಲರಾದ ರಾಜಶೇಖರ ರಾವ್ ಮತ್ತು ಧನಂಜಯ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಪಾಣೆಮಂಗಳೂರಿನ ಬಂಗ್ಲೆಗುಡ್ಡೆ ನಾರಾಯಣ ಮಯ್ಯರ ಮುಳುಗಡೆ ಭೂಮಿಯಲ್ಲಿ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಭೆ ಸೇರಿ ನ್ಯಾಯಾಂಗ ನಿಂದನೆ ಕಾನೂನಿನ ಅಡಿಯಲ್ಲಿ ಜಿಲ್ಲಾಡಳಿತ ನಗರ ಪಾಲಿಕೆ, ಸರಕಾರ ಮುಖ್ಯ ಕಾರ್ಯದರ್ಶಿ, ಮ.ನ.ಪಾ ಕಮಿಷನರ್, ಒಳಚರಂಡಿ ಇಲಾಖಾ ಇಂಜಿನಿಯರ್, ಮ.ನ.ಪಾ ಭೂಸ್ವಾದೀನಾಧಿಕಾರಿ, ತಹಶೀಲ್ದಾರ್ ಬಂಟ್ವಾಳ ಇವರ ವಿರುದ್ಧ ದಾವೆ ಹೂಡಿ ಹೈಕೋರ್ಟಿನಿಂದ ನ್ಯಾಯದಾನ ಪಡೆಯಲು ಒಮ್ಮತದ ನಿರ್ಣಯಕ್ಕೆ ಬರಲಾಯಿತು.

ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಬಿ. ಶ್ರೀಧರ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ , ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎಚ್.ಕೆ ಇದಿನಬ್ಬ , ತಾಲೂಕು ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ಸುದೇಶ ಮಯ್ಯ ಉಪಸ್ಥಿತರಿದ್ದರು. ಎಂ ಸುಬ್ರಹ್ಮಣ್ಯ ಭಟ್ ಸರ್ವರನ್ನು ಸ್ವಾಗತಿಸಿದರು. ಎನ್.ಕೆ.ಇದ್ದಿನಬ್ಬ ಧನ್ಯವಾದವಿತ್ತರು ಶರತ್ ಕುಮಾರ್ ನಿರೂಪಿಸಿದರು. ಮನೋಹರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.