ಬಂಟ್ವಾಳ : ಸಜೀಪನಡು ಗ್ರಾಮದಲ್ಲಿ ಸುಮಾರು 34 ಲಕ್ಷ ರೂ.ಅನುದಾನದ ವಿವಿಧ 7 ಕಾಮಗಾರಿಗಳಿಗೆ ಅಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಶಂಕುಸ್ಥಾಪನೆ ಮಾಡಿದರು.ಸಜೀಪನಡು ಬೋಳಮೆ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 10 ಲಕ್ಷ.ರೂ, ಸಜೀಪನಡು ಹೂಳೆಬದಿಯ ತಡೆಗೋಡೆಗೆ 10 ಲಕ್ಷ.ರೂ, ತಂಚಿಬೊಟ್ಟು ರಸ್ತೆ ಕಾಂಕ್ರೀಟ್ ಕಾಮಗಾರಿಗೆ 3 ಲಕ್ಷ.ರೂ, ಸಜೀಪ ಹೊಳೆಬದಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 2 ಲಕ್ಷ.ರೂ, ಕೋಣಿಮಾರು ಕಾಂಕ್ರೀಟ್ ಕಿರು ಸೇತುವೆಗೆ 5 ಲಕ್ಷ.ರೂ, ಮೆರ್ಸಲಚ್ಚಿಲ್ ಕಾಂಕ್ರೀಟ್ ಕಾಲು ಸೇತುವೆಗೆ 2 ಲಕ್ಷ.ರೂ, ಗೋಳಿಪಡ್ಪು ರಸ್ತೆ ಕಾಂಕ್ರೀಟ್ ಕಾಮಗಾರಿಗೆ 2 ಲಕ್ಷ.ರೂ, ಈ ಎಲ್ಲಾ ಕಾಮಗಾರಿಗಳಿಗೆ ಸಚಿವ ಯು.ಟಿ ಖಾದರ್ ಶಂಕುಸ್ಥಾಪನೆ ಮಾಡಿದರು .
ಈ ಕಾರ್ಯಕ್ರಮದಲ್ಲಿ ಎಸ್.ಅಬ್ಬಾಸ್ ಹಾಜಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ, ಹಾಗೂ ರಝಾಕ್ ಹಾಜಿ, ಅಧ್ಯಕ್ಷರು ಕೇಂದ್ರ ಜುಮಾ ಮಸೀದಿ ಸಜೀಪನಡು, ಉಮರ್ ಫಾರೂಕ್ ಮಾಜಿ ಪುದು ಜಿಲ್ಲಾ ಪಂಚಾಯತ್ ಸದಸ್ಯ , ರಝಾಕ್ ಅಧ್ಯಕ್ಷರು ಇರಾ ಗ್ರಾ.ಪಂ, ರಮೇಶ್ ಶೆಟ್ಟಿ ಬೋಳಿಯಾರ್, ಬಶೀರ್ ಬೋಳಮೆ, ಸೋಮನಾಥ ಭಂಡಾರಿ,ಎಸ್ ಇಬ್ರಾಹಿಂ, ಸತ್ತಾರ್ ಹಾಜಿ, ಎಸ್ ಅಬುಬಕ್ಕರ್, ಸಿರಾಜ್ ಕಿನ್ಯಾ, ರಫೀಕ್ ಗೋಳಿಪಡ್ಪು, ಅಬ್ದುಲ್ ರಹಿಮಾನ್( ಅದ್ದಮ) ಸಜೀಪನಡು ಯುವ ಕಾಂಗ್ರೇಸ್ ನ ಅಧ್ಯಕ್ಷ ಅಬ್ದುಲ್ ರಹಿಮಾನ್(ನಿಸಾರ್), ಉಪಧ್ಯಕ್ಷ ಸಂಶೀರ್(ಮೋನ್), ಸದಸ್ಯರಾದ
ಫೈರೋಝ್ ಎಸ್.ಎಂ,ಇಂತಿಯಝ್ ,ಸಿರಾಜ್, ಮುಸ್ತಾಕ್, ಅಸ್ಪಾಕ್, ನೌಶಾದ್ ಉಪಸ್ಥಿತರಿದ್ದರು.
