ಬಂಟ್ವಾಳ: ತಾಲ್ಲೂಕಿನ ನಂದಾವರ ಮತ್ತು ಮೆಲ್ಕಾರ್ ಹಾಗೂ ಪಾಣೆಮಂಗಳೂರು ಮತ್ತಿತರ ಕಡೆಗಳಲ್ಲಿ ರಸ್ತೆ ಬದಿ ನಿಂತಿರುವ ಸಾಕುಪ್ರಾಣಿ ಆಡು ಮತ್ತು ಜಾನುವಾರುಗಳನ್ನು ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿ ಪರಾರಿಯಾಗುತ್ತಿರುವ ದಂಧೆಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಹಚ್ಚಿ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.

ಇಲ್ಲಿನ ನಂದಾವರ ಮಸೀದಿ ಬಳಿ ನಿವಾಸಿ ಅಹ್ಮದ್ ಬಾವ, ಆಲಡ್ಕ ನಿವಾಸಿ ರಝಾಕ್, ಉಂಝ, ಬೋಗೋಡಿ ನಿವಾಸಿ ದಾವೂದ್, ಗೂಡಿನಬಳಿ ನಿವಾಸಿ ಹೈದರ್ ಎಂಬವರಿಗೆ ಸೇರಿದ ಆಡುಗಳ ಸಂಖ್ಯೆ ಕಳೆದ ಏಳೆಂಟು ತಿಂಗಳಿನಿಂದ ಇಳಿಮುಖವಾಗುತ್ತಿತ್ತು ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಅವರು ರಾತ್ರಿ ವೇಳೆ ಕಾದು ಕುಳಿತು ಗಮನಿಸಿದಾಗ ಮಾರುತಿ ಓಮ್ನಿ ಕಾರಿನಲ್ಲಿ ಕಳ್ಳರ ತಂಡವೊಂದು ಆಡುಗಳನ್ನು ತುಂಬಿಸಿ ಪರಾರಿಯಾಗುತ್ತಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇದರಿಂದಾಗಿ ಫರಂಗಿಪೇಟೆಯಲ್ಲಿ ಕಾಯರ್ಾಚರಣೆ ನಡೆಸಿದ ಪೊಲೀಸರಿಗೆ ಕೆಲವೊಂದು ಆಡು ಮತ್ತು ಜಾನುವಾರು ದೊರೆತಿದೆ ಎನ್ನಲಾಗಿದ್ದು, ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಮಡು ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *