ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಇಲ್ಲಿನ ಮಾತೃಭೂಮಿ ಗೆಳೆಯರ ಬಳಗ ವತಿಯಿಂದ ಕಳೆದ ಶನಿವಾರ ರಾತ್ರಿ ತಳಕಲ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಕೊಳಂಬೆ ಮೇಳದವರಿಂದ ಶನಿವಾರ ರಾತ್ರಿ ನಡೆಸಿದ ಯಕ್ಷಗಾನ ಬಯಲಾಟ ಏರ್ಪಡಿಸಿದ್ದರು. ಈ ಮೇಳದಲ್ಲಿ ತೆಂಕುತಿಟ್ಟಿನ ಪ್ರಭುದ್ಧ ಕಲಾವಿದರು ಭಾಗವಹಿಸುವ ಬಗ್ಗೆ ಇಲ್ಲಿನ ಸಂಘಟಕರು ಅಲ್ಲಲ್ಲಿ ಬ್ಯಾನರ್ ಅಳವಡಿಸಿ ಪ್ರಚಾರವನ್ನೂ ನಡೆಸಿದ್ದರು. ಅಂದು ಸಂಜೆ ಧಾರ್ಮಿ ಕ ಸಭೆ, ಸಾಧಕರಿಗೆ ಸನ್ಮಾನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆದಿತ್ತು.ಇದರಿಂದಾಗಿ ಸಾವಿರಾರು ಮಂದಿ ಯಕ್ಷಗಾನ ಅಭಿಮಾನಿಗಳು ಜಮಾಯಿಸಿದ್ದು, ಜನಪ್ರಿಯ ಕಲಾವಿದರ ಅಭಿಮಾನಿಗಳು ಕೂಡಾ ಇದ್ದರು.22btl-Pachinadka

ಆದರೆ ಈ ಮೇಳದ ಪ್ರಮುಖ ಕಲಾವಿದರೊಬ್ಬರು ಮಾತ್ರ ಇತರ ಕೆಲವೊಂದು ಜನಪ್ರಿಯ ಕಲಾವಿದರೊಮದಿಗೆ ರಾತ್ರಿ ಒಂದೂವರೆ ಗಂಟೆಗೆ ಬದಲಾಗಿ ಮೂರು ಗಂಟೆಗೆ ಆಗಮಿಸಿದ್ದಾರೆ. ಇದಕ್ಕೆ ಮೊದಲು ಅವರು ಕುಂದಾಪುರ ತಾಲ್ಲೂಕಿನಲ್ಲಿ ನಡೆದ ಯಕ್ಷಗಾನದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಇದೇ ವೇಳೆ ಅವರು ವಿಳಂಬವಾಗಿ ಬಂದಿರುವುದಲ್ಲದೆ ಮತ್ತೆ ನಾಲ್ಕು ಗಂಟೆಗೆ ಮಂಗಳೂರಿನ ಸಸಿಹಿತ್ಲು ಎಂಬಲ್ಲಿ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲು ತೆರಳುತ್ತಿದ್ದಾರೆ ಎಂಬ ವಿಷಯ ಅರಿತ ಕೆಲವೊಂದು ಪ್ರೇಕ್ಷಕರ ತಂಡವು ಅವರನ್ನು ಸುತ್ತುವರಿದು ಹಲ್ಲೆ ನಡೆಸಿ ಪ್ರೇಕ್ಷಕರನ್ನು ಕಡೆಗಣಿಸದಂತೆ ಎಚ್ಚರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಆಧುನಿಕತೆ ಈ ಕಾಲದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಸುವುದಕ್ಕಾಗಿ ಲಕ್ಷಾಂತರ ಮೊತ್ತವನ್ನು ಖರ್ಚು  ಮಾಡುವ ಸಂಘಟಕರ ಕಷ್ಟ ನಷ್ಟಗಳ ಬಗ್ಗೆಯೂ ಕಲಾವಿದರು ಗಮನ ಹರಿಸಬೇಕು ಎಂದು ಕಾರ್ಯಕ್ರಮ ಸಂಘಟಕ ಶೇಖರ ಶೆಟ್ಟಿ ಅಮ್ಟಾಡಿ ಇವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *