ಬಂಟ್ವಾಳ: ಸರಕಾರ ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ ನೂತನವಾಗಿ 4ಮೀ ಎತ್ತರದ ಡ್ಯಾಂ ನಿರ್ಮಿಸಿ 2017ರಲ್ಲಿ ನೀರು ಸಂಗ್ರಹಿಸಿದ್ದು ಈ ಬಗ್ಗೆ 2004ರಿಂದ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಜಲಾವೃತಗೊಳ್ಳುವ ಭೂ ಪ್ರದೇಶದ ಸ್ಪಷ್ಟ ಚಿತ್ರಣವನ್ನು ನೀಡಬೇಕೆಂದು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಲಿಖಿತವಾಗಿ ಮನವಿ ಮಾಡಿದ್ದರೂ ಸ್ಪಷ್ಟ ಪಾರದರ್ಶಕವಾದ ಲಿಖಿತ ಮಾಹಿತಿ ಈ ತನಕ ನೀಡದೆ 13 ವರ್ಷಗಳಿಂದ  ಭಾಗದ ಅನ್ನದಾತನ ಸಮಸ್ಯೆ ನೆನೆಗುದಿಗೆ ಬಿದ್ದಿದ್ದು ಜನಪ್ರತಿನಿಧಿಗಳು,ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿ ರೈತರನ್ನು ಕಡೆಗಣಿಸಿರುವುದು ದುರ್ದವ್ಯ ಎಂದು ಸಂತ್ರಸ್ತ ರೈತ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ನಗರಪಾಲಿಕೆ ಮೇಯರ್ ವಿಧಾನ ಸೌಧದಲ್ಲಿ ಶಾಸಕರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಒಂದಕ್ಕೊಂದು ತಾಳೆಯಾಗದ ಅಜಗಜಾಂತರ ವ್ಯತ್ಯಾಸವಿರುವ ಗೊಂದಲದಿಂದ ಕೂಡಿದ ಅಂಕಿ ಅಂಶ ನೀಡಿರುತ್ತಾರೆ.ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಂಟಿಯಾಗಿ ರಾಜ್ಯ ಉಚ್ಛನ್ಯಾಯಾಲಯದಲ್ಲಿ ರೈತರ ಹಿತಾಶಕ್ತಿ ಕಾಪಾಡಿ ರೈತರಿಗೆ ನ್ಯಾಯ ಒದಗಿಸುವಂತೆ ದಾವೆ ಹೂಡಿದಾಗ ಹೈಕೋರ್ಟ್ ರೈತರ ಸಮಕ್ಷಮ ಮರು ಸರ್ವೆ ಮಾಡಿ ಕೇಂದ್ರ ಜಲ ಆಯೋಗ ನಿರ್ದೇಶನದಂತೆ ವರತೆ ಪ್ರದೇಶವನ್ನು ಸೇರಿಸಿ ರೈತರಿಗೆ ಸೂಕ್ತ ನ್ಯಾಯೋಚಿತ ಪರಿಹಾರ ನೀಡಿ ಒಂದು ತಿಂಗಳೊಳಗೆ ಕೋರ್ಟಿಗೆ ವರದಿ ಸಲ್ಲಿಸುವಂತೆ ತಿಳಿಸಿದೆ. ಆದರೆ ಪಾಲಿಕೆ ಹಾಗೂ ಜಿಲ್ಲಾಡಳಿತ ಇವೆಲ್ಲವನ್ನು ಗಾಳಿಗೆ ತೂರಿ ರೈತರ ಜ್ವಲಂತ ದೀರ್ಘಕಾಲಿನ ಸಮಸ್ಯೆಗೆ ಸ್ಪಂದಿಸದೆ ಇರುವುದು ದುರದೃಷ್ಟಕರ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತು ರೈತರ ಹಿತಾಶಕ್ತಿ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ತಮ ಕೈಗೊಳ್ಳಲು ಸಮಿತಿ ಆಗ್ರಹಿಸಿದೆ.

By suddi9

Leave a Reply

Your email address will not be published. Required fields are marked *