ಬಂಟ್ವಾಳ: ಕಥೋಲಿಕ್ ಸಭಾ ಸಿದ್ಧಕಟ್ಟೆ ಘಟಕದ ಅಧ್ಯಕ್ಷೆಯಾಗಿ ರೀಟಾ ಮರಿಯಾ ಮಿನೇಜಸ್ ಆಯ್ಕೆಯಾಗಿದ್ದಾರೆ.

ಆಧ್ಯಾತ್ಮಿಕ ನಿರ್ದೇಶಕರಾಗಿ ವಂದನೀಯ ಸ್ವಾಮಿ ಅಂತೋನಿ ಲಸ್ರಾದೊ, ಉಪಾಧ್ಯಕ್ಷರಾಗಿ ಮೆಲ್ವಿನ್ ರೊಡ್ರಿಗಸ್, ಕಾರ್ಯದರ್ಶಿಯಾಗಿ ಪ್ರಕಾಶ್ ಸಲ್ಡಾನ್ಹಾ, ಜೊತೆಕಾರ್ಯದರ್ಶಿಯಾಗಿ ಪ್ರೆಸಿಲ್ಲಾ ಅಲ್ಬುಕರ್ಕ್, ಖಜಾಂಚಿಯಾಗಿ ಕೆವಿನ್ ಲೋಬೊ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ವಲೇರಿಯನ್ ಲೋಬೊ, ಸ್ತ್ರೀ ಹಿತಾ ಸಂಚಾಲಕಿಯಾಗಿ ಮೋಲಿ ಡಿಸೋಜಾ, ರಾಜಕೀಯ ಸಂಚಾಲಕರಾಗಿ ಝೇವಿಯರ್ ಡಿಸೋಜಾ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ರಿಚರ್ಡ್ ಡಿಕೋಸ್ತಾ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.