ಬಂಟ್ವಾಳ ತಾಲ್ಲೂಕಿನ ಶಂಭೂರು ಗ್ರಾಮದ ಗುಡ್ಡೆಮನೆಗುತ್ತು ನಾಗಬನದಲ್ಲಿ ಇದೇ 19ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಸೋಮವಾರ ಸಂಜೆ ಬಿ.ಸಿ.ರೋಡ್ನಲ್ಲಿ ಏರ್ಪಡಿಸಿದ್ದ ವಿವಿಧ ಸಮಿತಿ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾಣಿಲ ಮೋಹನದಾಸ ಸ್ವಾಮೀಜಿ ಮಾರ್ಗದರ್ಶನ ನೀಡಿದರು. ಸಮಿತಿ ಅಧ್ಯಕ್ಷ ಮಾಧವ ಬಂಗೇರ, ಕಾರ್ಯಾಧ್ಯಕ್ಷ ಪ್ರಕಾಶ ಕಾರಂತ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಂಜೀವ ಪೂಜಾರಿ ಮತ್ತಿತರರು ಇದ್ದರು.
