ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂಖ್ಯೆ 16ರ ಮೂಡುನಡುಗೋಡು ಮತ್ತು ಬುಡೋಳಿ ಗ್ರಾಮದ ಬೀಟ್ ಸಭೆ ಪಂಜಿಕಲ್ಲು ಗ್ರಾ.ಪಂ.ನ ಸಭಾಂಗಣದಲ್ಲಿ ಪ್ರೋಬೇಷನರಿ ಸಹಾಯಕ ಪೋಲೀಸ್ ಅದೀಕ್ಷಕರಾದ ನಾಗೇಶ್ ಡಿ.ಎಲ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಬಳಿಕ ಮಾತನಾಡಿದ ಅವರು ಗ್ರಾಮಕ್ಕೊಬ್ಬ ಪೋಲೀಸ್ ಅಧಿಕಾರಿ ಎಂಬ ಹೊಸ ಬೀಟ್ ವ್ಯವಸ್ಥೆಯ ಮೂಲಕ ಕಾನೂನು ಸುವ್ಯಸ್ಥೆಯನ್ನು ಕಾಪಾಡುವಲ್ಲಿ ಪೋಲೀಸರೊಂದಿಗೆ ಗ್ರಾಮಸ್ಥರು ಕೈ ಜೋಡಿಸುವುದು ಅತೀ ಮುಖ್ಯ ಎಂದರು.

IMG-20170418-WA0001

IMG-20170418-WA0002

IMG-20170418-WA0005

IMG-20170418-WA0012ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕ ಉಮೇಶ್ ಎಂ .ಎನ್ ಮಾತನಾಡಿ ಹೋಸ ಈ ಬೀಟ್ ವ್ಯವಸ್ಥೆಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಘಿ ಸ್ಪಂದಿಸಲು ಸಹಕಾರಿಯಾಗುತ್ತದೆ ಮತ್ತು ವ್ಯವಸ್ಥೆ ಸರಿಯಾಗಿ ಕಾರ್ಯಗತವಾಗಲು ಸಾರ್ವಜನಿಕರ ಸಹಕಾರ ಅಷ್ಟೇ ಮುಖ್ಯ ಎಂದರು. ವೇದಿಕೆಯಲ್ಲಿ ಪಂಜಕಲ್ಲು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ವೇದ, ಗ್ರಾ.ಪಂ.ಅಧ್ಯಕ್ಷರಾದ ಸುಮಿತ್ರಯೋಗೀಶ್, ಉಪಾಧ್ಯಕ್ಷರಾದ ಲಕ್ಮೀನಾರಾಯಣ ಗೌಡ, ಬೀಟ್ ಪೋಲೀಸ್ ಅಧಿಕಾರಿಯಾದ ಮನೋಜ್ ಕುಮಾರ್ ಹಾಗೂ ಬೀಟ್ ಸದಸ್ಯರು ಉಪಸ್ಥಿತರಿದ್ದರು. ಬೀಟ್ ಸದಸ್ಯ ಸಂಜೀವ ಪೂಜಾರಿ ಸ್ವಾಗತಿಸಿ, ಕೇಶವ ಗೌಡ ವಂದಿಸಿದರು.

By suddi9

Leave a Reply

Your email address will not be published. Required fields are marked *