ಬಜಪೆ:ಆಧುನಿಕ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳ ವೇಗದ ಬದಲಾವಣೆಗಳ ಮಧ್ಯೆ ನಾಡಿನ ಸಂಸ್ಕ್ರತಿ-ಸಂಸ್ಕಾರಗಳನ್ನು ವ್ಯವಸ್ಥಿತವಾಗಿ ತಿಳಿ ಹೇಳಿದಾಗ ಮಕ್ಕಳು ಸುಂಸ್ಕ್ರತರಾಗಿ ಇತರರಿಗೆ ಮಾದರಿಯಾಗಬಲ್ಲರು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.ಆವರು ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನದ ಆಶ್ರಯದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾದ ಇಂಚರ ಮಕ್ಕಳ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೀನ್ಯ ತಲಪಾಡಿ ಕೇಶವ ಶಿಶುಮಂದಿರದ ವ್ಯವಸ್ಥಾಪಕ ನಾರಯಣ ಕಜೆ ಅವರು ಶಿಬಿರದ ಆಶಯ ಹೇಳಿದರು.ಪ್ರೇಮಲತಾ ವಿ.ಶೆಟ್ಟಿ, ಪದ್ಮಾವತಿ ಜೆ.ಶೆಟ್ಟಿ, ಶೈಲಿನಿ ಸೇಮಿತ, ದೇವಳದ ಅರ್ಚಕ ಗೋಪಾಲ ಭಟ್, ವಕೀಲರಾದ ಉದಯಕುಮಾರ್ ಶೆಟ್ಟಿ, ಅರ್ಜುನ್ ರೈ, ಹಿಂದೂ ಸೇವಾ ಪ್ರತಿಷ್ಠಾನದ ಭಗಿನಿಯರಾದ ರೂಪ ಹಾಗೂ ಭಾರತಿ ಉಪಸ್ಥಿತರಿದ್ದರು.
ಶಿಬಿರದಲ್ಲಿ 6ರಿಂದ 9ನೇ ತರಗತಿಯವರೆಗೆ 100 ಮಂದಿ ಪಾಲ್ಗೊಳ್ಳುತ್ತಿದ್ದು, ಶ್ಲೋಕ, ಹಾಡು, ನೃತ್ಯ, ಅಭಿನಯ,ಮಾತೃ ಪೂಜನ, ಚಿತ್ರಕಲೆ. ಭಜನೆ, ವಚನಗಳು ಹೀಗೆ ಅನೇಕ ವಿಚಾರ ಕುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಾರೆ. ಏ.28ರಂದು ಶಿಬಿರ ಸಮಾರೋಪಗೊಳ್ಳಲಿದೆ.
