ಮೂಡುಬಿದಿರೆ:ಮುಹಿಯುದ್ದೀನ್ ಜುಮಾ ಮಸೀದಿ ಕಾಶಿಪಟ್ನ ಇದರ ಮಹಾಸಭೆಯು ಹಾಸ್ಕೋ ಅಬ್ದುರ್ರಹ್ಮಾನ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಖತೀಬರಾದ ಝುಬೈರ್ ಮುಸ್ಲಿಯಾರ್ ದುಆ ನೆರವೇರಿಸೀದರು. ಅಬೂಬಕ್ಕರ್ ಮರೋಡಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

mbd_may10_3 abdurahmana
ಅಧ್ಯಕ್ಷರಾಗಿ ಹಾಜಿ ಅಬ್ದುರ್ರಹ್ಮಾನ್ ಹಾಸ್ಕೋ, ಉಪಾಧ್ಯಕ್ಷರಾಗಿ ಕೆ.ಎಸ್.ಪುತ್ತುಮೋನು, ಮಾಸ್ಟರ್ ಫಕೀರಬ್ಬ, ಹಾಸ್ಕೋ ಇಲ್ಯಾಸ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮರೋಡಿ, ಕಾರ್ಯದರ್ಶಿಗಳಾಗಿ ಅಬ್ದುಲ್ ರಹಮಾನ್ ಕೇಳದಪೇಟೆ, ಅಬ್ದುಲ್ ಹಮೀದ್ ಕಾಶಿಪಟ್ನ, ಕೋಶಾಧಿಕಾರಿಯಾಗಿ ಕೆ.ಎಸ್.ಇಸ್ಮಾಯಿಲ್ ಮತ್ತು 19 ಮಂದಿ ಸದಸ್ಯರ ಕಾರ್ಯಕಾರಿಣಿ ಸಮಿತಿ ರಚಿಸಲಾಯಿತು.
ಅಬ್ದುಲ್ ರಹಮಾನ್ ಕೇಳದಪೇಟೆ ಸ್ವಾಗತಿಸಿದರು. ಅಬ್ದುಲ್ ಹಮೀದ್ ಕಾಶಿಪಟ್ನ ವಂದಿಸಿದರು.

By suddi9

Leave a Reply

Your email address will not be published. Required fields are marked *