ಬಂಟ್ವಾಳ: ಪುನರ್ ನಿರ್ಮಾಣಗೊಳ್ಳಲು ಸಜ್ಜಾಗಿರುವ ಅದ್ಬುತ ಪ್ರಕೃತಿ ಸೌಂದರ್ಯದ ಶಿವಕ್ಷೇತ್ರ ನರಹರಿ ಪರ್ವತ ಸದಾಶಿವ ದೇವಸ್ಥಾನ ಜೀರ್ಣೊದ್ದಾರದ ಬಗ್ಗೆ ವಿಜ್ಞಾಪನಾ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಹಾಗೂ ನರಹರಿ ಪರ್ವತ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಡಿ.ವಿರೇಂದ್ರ ಹೆಗ್ಗಡೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು.

10bhnarahari
ಸುಮಾರು 6 ಕೋಟಿ ರೂ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ, ಸುತ್ತುಪೌಲಿ ,ಶ್ರೀ ಗಣಪತಿ ಗುಡಿ, ರಾಜಗೋಪುರ ಸಭಾಗೃಹ ಮೊದಲಾದ ಪುನರ್ ನಿರ್ಮಾಣ ಕಾಮಗಾರಿ ವಾಸ್ತು ಶಿಲ್ಪಿ ಶ್ರೀ ಮುನಿಯಂಗಲ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಗರ್ಭಗುಡಿಯ ಶಿಲಾ ಕಲ್ಲಿನ ಕೆತ್ತನೆ ಕೆಲಸ ಉಪ್ಪಿನಂಗಡಿ ಬಳಿ ಭರದಿಂದ ಸಾಗುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ಪ್ರಶಾಂತ್ ಮಾರ್ಲ ರವರು ಡಾ. ವಿರೇಂದ್ರ ಹೆಗ್ಗಡೆಯವರಿಗೆ ವಿವರಿಸಿದರು.

ಡಾ.ವೀರೇಂದ್ರ ಹೆಗ್ಗಡೆಯವರು ಪುನರ್ ನಿರ್ಮಾಣ ಕಾರ್ಯದ ಬಗ್ಗೆ ಮಾರ್ಗದರ್ಶನ ನೀಡಿದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ.ಆತ್ಮರಂಜನ್ ರೈ. ಉತ್ಸವ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕರಾದ ಎ.ರುಕ್ಮಯ್ಯ ಪೂಜಾರಿ. ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾದ ಕೆ ವಿಶ್ವನಾಥ ಶೆಟ್ಟಿ, ಯಶು ವಿಟ್ಲ. ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರತಿಭಾ ಆತ್ಮರಂಜನ್ ರೈ. ಯಂ.ಯನ್. ಕುಮಾರ್, ಮಾಧವ ಶೆಣೈ, ಬಾಲಕೃಷ್ಣ ಪೂಜಾರಿ, ಜೀರ್ಣೋದ್ದಾರ ಸಮಿತಿ ಸಂಘಟನಾ ಕಾರ್ಯದರ್ಶಿಗಳಾದ ಸೀತಾರಾಮ ಶೆಟ್ಟಿ ಕಾಂತಾಡಿ ಗುತ್ತು, ಶಂಕರ ಆಚಾರ್ಯ ಹಾಗೂ ಕೃಷ್ಣಪ್ಪ ಪೂಜಾರಿ, ಪ್ರಕಾಶ ಆಚಾರ್ಯ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *