ಮಂಗಳೂರು: ಈಗಿನ ಆಧುನಿಕ ಯುಗದಲ್ಲಿ ಎಷ್ಟು ಶಿಕ್ಷಣ ಪಡೆದರು ಅದು ಸಾಕಾಗುದಿಲ್ಲ. ಅದ್ದರಿಂದ ವಿಧ್ಯಾರ್ಥಿಗಳು ಹೆಚ್ಚೆಚ್ಚು ಅಸಕ್ತಿವಹಿಸಿ ಶಿಕ್ಷಣವನ್ನು ಸವಾಲಾಗಿ ಸ್ವೀಕರಿಸಬೇಕು, ಈ ನಿಟ್ಟಿನಲ್ಲಿ ಜಪ್ಪಿನಮೊಗರು ಬಂಟರ ಸಂಘ ವಿದ್ಯೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕ . ಐವನ್ ಡಿ’ ಸೋಜ ಹೇಳಿದರು. ಅವರು ಬಂಟರ ಸಂಘ ಜಪ್ಪಿನಮೊಗರು ಇದರ ವತಿಯಿಂದ ಜರಗಿದ ಉಚಿತ ಪುಸ್ತಕ ವಿತರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತಾನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ .ಜೆ ಸೀತಾರಾಮಶೆಟ್ಟಿಯವರು ವಹಿಸಿದರು. ಮುಖ್ಯ ಅತಿಥಿಗಳಾಗಿ, ವಸಂತ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಬಂಟರಯಾನೆ ನಾಡವರ ಮಾತೃ ಸಂಘ ಮಂಗಳೂರು. ವಿಜಯಲಕ್ಷ್ಮೀ ಬಿ ಶೆಟ್ಟಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಸಮಿತಿ. ಕೆ ಸದಾನಂದ ಆಳ್ವ ಅಧ್ಯಕ್ಷರು ಕೊರ್ದಬ್ಬು ದೈವಸ್ಥಾನ , ದಿವಿನ್ ಮೇಂಡ ಮಾಜಿ ಅಧ್ಯಕ್ಷರು ಬಂಟರ ಸಂಘ ಕುವೈಟ್, ಪುಷ್ಪರಾಜ್ ಶೆಟ್ಟಿ ಮಾಜಿ ಅಧ್ಯಕ್ಷರು ಬಂಟರಸಂಘ ಜಪ್ಪು, ಜಯಂತಿ. ಬಿ.ಶೆಟ್ಟಿ ಮಾಜಿ ಕಾಪೋರೇಟರ್, ಜೆ. ಶಶಿಧರ ಶೆಟ್ಟಿ ಸ್ಥಾಪಕ ಅಧ್ಯಕ್ಷರು ಬಂಟರ ಸಂಘ ಜಪ್ಪಿನಮೊಗರು ಭಾಗವಹಿಸಿದರು, ಸಂಘದ ಉಪಾಧ್ಯಕ್ಷರಾದ ಜಗಧೀಶ ಕಿಲ್ಲೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಹರೀಶ ಶೆಟ್ಟಿ ವಂದಿಸಿದರು, ಪ್ರಕಾಶ ಮೇಲಾಂಟ ಮತ್ತು ಕರುಣಾಕರಶೆಟ್ಟಿ ನಿರ್ವಹಿಸಿದರು,