ಬಂಟ್ವಾಳ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಪ್ರಧೇಶಾಭಿವೃದ್ದಿ ನಿಧಿಯಡಿ ಸುಮಾರು 20 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುದು ಗ್ರಾಮದ ಕಬೆಲ- ಪೆಲಪಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.BTW_JUNE5_2

ಈ ಸಂದರ್ಭ ಮಾತನಾಡಿದ ಅವರು ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಸಚಿವರ ಒದಗಿಸಿಕೊಟ್ಟಿದ್ದಾರೆ. ತಮ್ಮ ಊರಿನ ಅಭವೃದ್ದಿಗೆ ಶ್ರಮಿಸಿದ ಸಚಿವರ ಉಪಕಾರ ಸ್ಮರಣೆಯನ್ನು ಗ್ರಾಮಸ್ಥರು ಮಾಡಿಕೊಳ್ಳಬೇಕಾಗಿದೆ ಎಂದರು. ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ ಕುಮ್ಡೇಲು, ಕಬೇಲ, ಕಾಪಿಕಾಡು, ಕಡೆಗೋಳಿ ಮೊದಲಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಈ ರಸೆಯನ್ನು ಕಾಂಕ್ರೀಟಿಕರಣ ಮಾಡಬೇಕೆನ್ನುವುದು ಇಲ್ಲಿನ ಜನರ ಬಹುದಿನ ಗಳ ಬೇಡಿಕೆಯಾಗಿತ್ತು.

ಪುದು ಗ್ರಾಮದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ನಡೆದಿದ್ದು ಸಚಿವ ಯು.ಟಿ.ಖಾದರ್ ಅವರು ಜನರ ಬೇಡಿಕೆಗೆ ಸ್ಪಂದಿಸಿ ತಕ್ಷಣ ಅನುದಾನ ಬಿಡುಗಡೆಗೊಳಿಸಿರುವುದು ಅಭಿನಂದನೀಯ ಎಂದರು. ತಾ.ಪಂ.ಉಪಾಧ್ಯಕ್ಷ ಅಬ್ಬಾಸ್‍ಅಲಿ, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್,ಝಾಹೀರ್, ನೀಲನ್ ನೆತ್ತರಕೆರೆ, ಕಿಶೋರ್ ಕುಮಾರ್, ಸದಾಶಿವ, ಶರೀಫ್ ಹತ್ತನೆಮೈಲು, ಮಜೀದ್ ಫರಂಗಿಪೇಟೆ, ಇಂಶಾದ್ ಮಾರಿಪಳ್ಳ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *