ಬಂಟ್ವಾಳ; ಭೂಮಿಯ ಕಣಕಣದಲ್ಲೂ ದೇವತ್ವವನ್ನು ಕಾಣುವ ಸಂಸ್ಕಾರ ಭಾರತೀಯರದ್ದು, ಆದರೆ ಇತ್ತೀಚೆಗೆ ನಮ್ಮೊಳಗಿನ ಮೂಲನಂಬಿಕೆಗಳು ನಶಿಸುತ್ತಿರುವುದು, ಪರಿಸರದ ನಾಶಕ್ಕೂ ಕಾರಣವಾಗುತ್ತಿದೆ, ಈ ಕುರಿತಾಗಿ ಆತ್ಮಾವಲೋಕನ ಅಗತ್ಯ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಮುಲ್ಕಿಯ ಗಜನೀ ಫೌಂಡೇಶನ್ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಲಕ್ಷ ವೃಕ್ಷ ಅಭಿಯಾನಕ್ಕೆ ಬಿ.ಸಿ.ರೋಡಿನ ರಿಕ್ಷಾಭವನದಲ್ಲಿ ನಡೆದ ಸಮಾರಂಭದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.ತಿಳಿದೋ ತಿಳಿಯದೆಯೋ ನಾವು ಪರಿಸರದ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಇಡೀ ಮನುಕುಲವೇ ಅಳಿವಿನತ್ತ ಮುಖಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಾವಯವ ಪರಿಸರ, ಆರೋಗ್ಯ ವಂತ ಪರಿಸರದತ್ತ ಎಲ್ಲರೂ ಹೆಚ್ಚಿನ ಆಸಕ್ತಿ ವಹಿಸುವಂತೆ ಕರೆ ನೀಡಿದರು.
ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಪರಿಸರಕ್ಕೆ ಮಾರಕವಾಗುವ ಎಲ್ಲಾ ಯೋಜನೆಗಳ ವಿರುದ್ದ ಏಕಮನಸ್ಸಿನ ಹೋರಾಟ ರೂಪುಗೊಳ್ಳಬೇಕು, ಪರಿಸರದ ಬಗ್ಗೆ ಕಾಳಜಿಯುಳ್ಳವರ ಕೈಗೇ ಅಧಿಕಾರ ನೀಡಬೇಕು ಎಂದರು.

1 2 3

ಗಜನೀ ಫೌಂಡೇಶನ್ ನ ಮುಖ್ಯಸ್ಥ ಯೋಗಿಶ್ ಕೋಟ್ಯಾನ್ ಮಾತನಾಡಿ, ಪರಿಸರದ ಮೇಲಿನ ಕಾಳಜಿಯಿಂದ ಗಜನೀ ಈ ವರ್ಷ ಒಂದು ಲಕ್ಷ ಗಿಡಗಳನ್ನು ವಿತರಿಸಿ ಬೆಳೆಸುವ ಯೋಜನೆ ರೂಪಿಸಿದೆ, ಇದಕ್ಕೆ ಸರ್ವರ ಸಹಕಾರ ಬೇಕಿದೆ ಎಂದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಹಸಿರು ಸೇನೆ ರೈತ ಸಂಘದ ಪ್ರ.ಕಾರ್ಯದರ್ಶಿ ಮನೋಹರ , ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಅರ್ಜುನ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಜನೀ ಫೌಂಡೇಶನ್ ಕಾರ್ಯಕರ್ತ ಮಿಥುನ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದ ಲ್ಲಿ ಗಂಧದ ಗಿಡಗಳನ್ನು ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *