ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10ನೇ ತರಗತಿಯ ವೈಭವ್ ವಿ. ರಾವ್ ವಿದ್ಯಾರ್ಥಿ ನಾಯಕನಾಗಿ ಹಾಗೂ 9 ನೇ ತರಗತಿಯ ವಿಜೇತ್ ಕೆ. ಎಂ. ಉಪನಾಯಕನಾಗಿ ಬಹುಮತದಿಂದ ಆಯ್ಕೆಗೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಯೋಗಿಕ ಅರಿವು ಮೂಡಿಸುವ ಹಿನ್ನಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಸಿಕೊಂಡು ವಿದ್ಯಾರ್ಥಿ ನಾಯಕರ ಆಯ್ಕೆಗೆ ಚುನಾವಣೆ ನಡೆಸಲಾಯಿತು.
ಮತಯಂತ್ರದ ಬಳಕೆ, ಅಭ್ಯರ್ಥಿಗಳಿಗೆ ಚಿಹ್ನೆ ನೀಡಿಕೆ , ಚುನಾವಣಾ ಅಧಿಕಾರಿಗಳ ವಿಶೇಷ ನಿಗಾ ವ್ಯವಸ್ಥೆ, ಮತಗಟ್ಟೆ ಅಧಿಕಾರಿಗಳ ನೇಮಕ, ಶಿಸ್ತುಪಾಲನೆಗೆ ಅಧಿಕಾರಿಗಳು ಮೇಲ್ವಿಚಾರಕರು, ಮತದಾರರಿಂದ ಮತದಾನ , ಮತಎಣಿಕೆ, ವಿಜೇತ ಅಭ್ಯರ್ಥಿಗಳ ಘೋಷಣೆ ಹೀಗೆ ಎಲ್ಲವೂ ಶಿಸ್ತುಬದ್ಧವಾಗಿ ನಡೆಯಿತು.

ಮುಖ್ಯ ಚುನಾವಣಾಧಿಕಾರಿಯಾಗಿ ಸಿ. ಶ್ರೀಧರ್, ಚುನಾವಣಾ ಅಧಿಕಾರಿಗಳಾಗಿ ವಿಜಯಲಕ್ಷ್ಮೀ .ವಿ . ಶೆಟ್ಟಿ ಹಾಗೂ ಗ್ರೇಸ್ ಪಿ ಸಲ್ಡಾನ ಕಾರ್ಯನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಮೋಹಿನಿ ಎ. ರೈ , ಮಂಜುಳಾ ಎಚ್. ಗೌಡ , ಸುಧಾ ಎನ್. ರಾವ್, ಯಜ್ಞೇಶ್ವರಿ ಎಸ್. ಶೆಟ್ಟಿ, ರಶ್ಮಿ ಫೆರ್ನಾಂಡಿಸ್, ಶುಭಾ, ಲೀಲಾ ಹಾಗೂ ಪ್ರಸಾದ್, ಶಿಸ್ತು ಪಾಲಕರಾಗಿ ದಿನಕರ್ ಪೂಜಾರಿ, ವಿಶಾಲಾಕ್ಷಿ ಎಚ್. ಆಳ್ವ ಹಾಗೂ ರಾಮಚಂದ್ರ ಅಜಿರವರು ಕಾರ್ಯನಿರ್ವಹಿಸಿದರು. ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ ಮಾರ್ಗದರ್ಶನ ನೀಡಿದರು.
