ಮಂಗಳೂರು: ಜೂ. 8 ರಂದು ಅಪರಾಹ್ನ ಗಂಟೆ 2 ಕ್ಕೆ ಕೆನರಾ ಪ್ರೌಢ ಶಾಲೆ ಉರ್ವ ಮಂಗಳೂರು ಇಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಇವರ ಆಶ್ರಯದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜೇತ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮದ ಪೂರ್ವಭಾವೀ ಸಭೆ ಮತ್ತು ಅದೇ ದಿನ ಗಂಟೆ 3 ಕ್ಕೆ ಇತ್ತೀಚೆಗೆ ನಿಧನರಾದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೇಶವ ಕೆ ಬಿ ರವರ ನಿಧನಕ್ಕೆ ಸಂತಾಪಕ ಸೂಚಕ ಸಭೆಯು ನಡೆಯಲಿದೆ. ಈ ಸಭೆಯಲ್ಲಿ ಇಲಾಖಾ ಅಧಿಕಾರಿಗಳು, ಶಾಲಾ ಮುಖ್ಯಸ್ಥರು, ಜನಪ್ರತಿನಿಧಿಗಳು ಮತ್ತು ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹೆಚ್ಚಿನ ಸಂಖ್ಯಯಲ್ಲಿ ಭಾಗವಹಿಸುವಂತೆ ಜಿಲ್ಲಾ ಸಂಘದ ಅಧ್ಯಕ್ಷ ಕೆ ಹೆಚ್ ನಾಯಕ್ ಮತ್ತು ಕಾರ್ಯದರ್ಶಿ ಶೇಖರ್ ಕಡ್ತಲ ಪ್ರಕಟಣೆಯಲ್ಲಿ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *