ಬಂಟ್ವಾಳ: ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರಿಗಿಂತ ಹೆಚ್ಚಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳೇ ಸಮಸ್ಯೆಗಳ ಸುರಿಮಳೆಯನ್ನು ಬಿಚ್ಚಿಡುವ ಮೂಲಕ ಮಿಂಚಿದರು.ಕೊಳ್ನಾಡು ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಅಳಿಕೆ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ,ಬಾಳ್ತಿಲ ಪಂಚಾಯತ್ ಅಧ್ಯಕ್ಷ ವಿಠಲ ನಾಯ್ಕ್ ಬಹುತೇಕ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಸ್ಯೆಗಳನ್ನು ಕರಾರುವಕ್ಕಾಗಿ ಮಂಡಿಸಿ ಅಧಿಕಾರಿಗಳಿಂದ ಉತ್ತರವನ್ನು ಪಡೆದರು.8bhmeeting

ಕೆಲ ವಿಚಾರಗಳಲ್ಲಿ ಗ್ರಾಮ ಪಂಚಾಯತ್ ಕೈಗೊಂಡ ನಿರ್ಣಯಕ್ಕೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ ,ಪಂಚಾಯತ್ ವ್ಯಾಪ್ತಿಯ ಅನಧಿಕ್ರತ ಕಟ್ಟಡ ತೆರವುಗೊಳಿಸುವಂತೆ ನಿರ್ಣಯ ಕೈಗೊಂಡು ಸಂಬಂದಪಟ್ಟವರಿಗೆ ಕಳುಹಿಸಿಕೊಟ್ಟು ತಿಂಗಳು‌ಕಳೆದರೂ ಕ್ರಮಕೈಗೊಂಡಿಲ್ಲ, ಕೆಲವೊಂದು ವಿಚಾರದಲ್ಲಿ ಪಂಚಾಯತ್ ಗಳನ್ನೇ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ತ್ರಿಸ್ಥರದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಒಂದು ಚಕ್ರವನ್ನೇ ಪಂಚರು ಮಾಡಲು ಪ್ರಯತ್ನ ನಡೆಯುತ್ತಿದೆ.ಎಲ್ಲಾ ವಿಚಾರದಲ್ಲೂ ಪಂಚಾಯತ್ ಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು ತನ್ಮೂಲಕ ಪಂಚಾಯತ್ ವ್ಯವಸ್ಥೆ ಬಲಪಡಿಸಬೇಕು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೊಳ್ನಾಡು ಪಂಚಾಯತ್ ಅಧ್ಯಕ್ಚ ಸುಭಾಶ್ಚಂದ್ರ ಶೆಟ್ಟಿ ಸಭೆಯ ಗಮನಸೆಳೆದರು.ಈ ಹಂತದಲ್ಲಿ ಸಭೆ ಸಂಪೂರ್ಣಗಪ್ಪಚಿಪ್ಪು ಆಗಿತ್ತು.ನಮ್ಮಿಂದ ತಾಪಂ ಸದಸ್ಯರಿಗೆ ಅಡ್ಡಿಯಾಗುವುದಾದರೆ ಸಭೆಯಿಂದ ಹೊರಹೋಗಲು ಸಿದ್ದರಿದ್ದೆವೆ ಎಂದು ಹೇಳಿದರು.

ಇದಕ್ಕೆ ದ್ವನಿ ಗೂಡಿಸಿದ ಸದಸ್ಯ ಪ್ರಭಾಕರ ಪ್ರಭು ಪಂಚಾಯತ್ ಅಧ್ಯಕ್ಷರು ಮಂಡಿಸಿದ ವಿಚಾರದಲ್ಲಿ ಸತ್ಯಾಂಶವಿದೆ.ಇದಕ್ಕೆ ಸಭೆ ಉತ್ತರಿಸುವ ಸ್ಥಿತಿಯಲ್ಲಿಲ್ಲ .ಹಾಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪಂ.ಅಧ್ಯಕ್ಷರು, ಉಪಾಧ್ಯಕ್ಷರು,ಪಿಡಿಒ,ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ ಪರಾಮರ್ಶೆ ನಡೆಸಬೇಕು ಎಂದು ಸಲಹೆ ನೀಡಿದರು.ಇದಕ್ಕೆ ಪಂ.ಕಾಯ್ದೆಯಲ್ಲೂ ಅವಕಾಶವಿದೆ ಎಂದರು.ಸದಸ್ಯ ಯಶವಂತ ಪೂಜಾರಿ ಅವರು ಇದನ್ನು ಸಮರ್ಥಿಸಿದರು. ಕಡತಕಾಣೆ…!ಬಂಟ್ಬಾಳ ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ ಅರ್ಜಿ,ಕಡತ ಕಾಣೆ ವಿಚಾರ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿತು. ಅಕ್ರಮ-ಸಕ್ರಮ ಕಡತಸಹಿತ ವಿವಿಧ ಪ್ರಮುಖ ಅರ್ಜಿಗಳೇ ಕಾಣೆಯಾಗುತ್ತಿದೆ.ಪ್ರಭಾವ ಬೀರಿದಾಗ ಮರುದಿನವೇ ಸಿಗುತ್ತದೆ.ಇದರಲ್ಲಿ ರೆಕಾಡ್೯ರೂಂನ ಸಿಬ್ಬಂದಿಗಳ ಕೈವಾಡವಿರುವ ಸಾಧ್ಯತೆ ಇದೆ ಎಂದು ಪಂ.ಅಧ್ಯಕ್ಷ ಸುಭಾಶ್ಚಂದ್ರ ಸಭೆಯ ಗಮನಸೆಳೆದರು.ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ಎಂಎಸ್ ಮಹಮ್ಮದ್ ಕಡತ ನಾಪತ್ತೆಯಾಗುತ್ತಿರುವುದು ಕಂದಾಯ ಇಲಾಖೆಗೆ ಕಪ್ಪುಚುಕ್ಕೆ.ಈನಿಟ್ಟಿನಲ್ಲಿ ತಹಶೀಲ್ದಾರರು ತಮ್ಮ ಕೈಕೆಳಗಿನ ಸಿಬ್ಬಂದಿಗಳನ್ನು ನಿಯಂತ್ರಣದಲ್ಲಿಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭ ಉತ್ತರಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ, ಮಿನಿ ವಿಧಾನಸೌಧ ಉದ್ಘಾಟನೆಗೊಂಡ ಕೂಡಲೇ ಎಲ್ಲ ಸಮಸ್ಯೆಗಳೂ ಪರಿಹಾರಗೊಳ್ಳುತ್ತದೆ ಎಂದರು. ಮಿನಿ ವಿಧಾನಸೌಧಕ್ಕೆ ರೆಕಾರ್ಡ್ ರೂಮ್ ಶಿಫ್ಟ್ಆದರೂ ಕಡತಗಳು ಮಾಯವಾಗುವುದು ನಿಂತಿಲ್ಲ. ಇದಕ್ಕೆ ಸೂಕ್ತ ಪರಿಹಾರ ಎಂದರೆ ಸಿ.ಸಿ. ಕ್ಯಾಮರಾ ಅಳವಡಿಸುವುದು ಎಂದು ಸಲಹೆ ನೀಡಿದ ಸುಭಾಶ್ಚಂದ್ರ ಶೆಟ್ಟಿ, ಇಡೀ ಮಿನಿ ವಿಧಾನಸೌಧಕ್ಕೆ ಕ್ಯಾಮರಾ ಅಳವಡಿಸಬೇಕು ಎಂದರು. ಆಗ ತಹಶೀಲ್ದಾರ್ ಉತ್ತರಿಸಿ, ಇದಕ್ಕೆ ದುಡ್ಡನ್ನು ನೀವು ಕೊಡುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಭಾಶ್ಚಂದ್ರ ಶೆಟ್ಟಿ, ಒಕ್ಕೂಟದ ನೆರವಿನಿಂದಾದರೂ ಸಿಸಿ ಕ್ಯಾಮರಾ ಅಳವಡಿಸಲು ಸಹಾಯ ಮಾಡುತ್ತೇವೆ.ಒಟ್ಕಾರೆ ತಾಲೂಕು ಕಚೇರಿಯಲ್ಲಿ ಪಾರದರ್ಶಕ ಆಡಳಿತದ ಅಗತ್ಯ ಇದೆ ಎಂದರು.ಕಂದಾಯ ಇಲಾಖೆ ಸರಕಾರಿ ಜಮೀನು ಗುರುತಿಸಿ ಅಳತೆ ಮಾಡುವ ವೇಳೆ ಸೌಜನ್ಯಕ್ಕಾದರೂ ಪಂಚಾಯತ್ ಗಮನಕ್ಕೆ ತಾರದ ಬಗ್ಗೆ ಬಾಳ್ತಿಲ ಪಂ.ಅಧ್ಯಕ್ಷ ವಿಠಲ ನಾಯ್ಕ್ ಾನ ವ್ಯಕ್ತಪಡಿಸಿದರು.ಆಗ ತಹಶೀಲ್ದಾರ್ ಪುರಂದರ ಹೆಗ್ಡೆಯವರು ಹಾರಿಕೆ,ಉಡಾಫೆಯಿಂದ ಉತ್ತರಿಸಿದರೂ ಜಿಪಂ ಸದಸ್ಯೆ ಕಮಾಲಾಕ್ಷಿ ಪೂಜಾರಿ ಹೊರತುಪಡಿಸಿ ಉಳಿದಂತೆ ಯಾವೊಬ್ಬ ಸದಸ್ಯರು ಇದನ್ನು ಅಕ್ಷೇಪಿಸದೆ ನಕ್ಕಿದ್ದು ಬಿಟ್ಟರೆ ಪಂ.ಅಧ್ಯಕ್ಷ ಪರ ನಿಲ್ಲಲಿಲ್ಲ.ತಹಶಿಲ್ದಾರರ ದ ವಿಠಲ ನಾಯ್ಕ್ ತ್ರಪ್ತರಾಗಲಿಲ್ಲ.ಇತ್ತ ಸದಸ್ಯ ರಮೇಶ್ ಕುಡ್ಮೇರ್ ಅವರು ಈಬಗ್ಗೆ ಪಂ.ನಲ್ಲಿ ಆಕ್ಷೇಪ ನಿರ್ಣಯ ಕೈಗೊಳ್ಳಿ ಎಂದು ಪಂ.ಅಧ್ಯಕ್ಷ ವಿಠಲ ನಾಯ್ಕ್ ರಿಗೆ ಸಲಹೆ ನೀಡಿ ಚರ್ಚೆಗೆ ತೆರೆ ಎಳೆದರು.

ವಿಶೇಷ ಆಹ್ವಾನಕ್ಕೆ ಸೀಮಿತ….! ಅಂಗನವಾಡಿ ಅಭಿವ್ರದ್ದಿಗೆ ತಾಪಂ ಸದಸ್ಯರ ಅನುದಾನಬೇಕು ಆದರೆ ನಾವು ಸಮನ್ವಯ ಸಮಿತಿಗೆ ವಿಶೇಷ ಆಹ್ವಾನಿತರ ಪಟ್ಟಿಗೆ ಸೀಮಿತವೇ ಎಂದು ರಮೇಶ್ ಕುಡ್ಮೇರು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರದ ಸುತ್ತೋಲೆಯಂತೆ ಸಮಿತಿ ರಚಿಸಲಾಗಿದೆ.ಆದರೂ ಜನಪ್ರತಿನಿಧಿಗಳನ್ನು ಆಹ್ವಾನಿಸಿಯೆ ಸಭೆ ನಡೆಸಲಾಗುತ್ತಿದೆ ಎಂದು ಸಿಡಿಪಿಒ ರವರು ಮಾಹಿತಿ ನೀಡಿದರು.

ಮೂಲಭೂತ ಸೌಲಭ್ಯವಿಲ್ಲ….

ಉತ್ತಮ ಫಲಿತಾಂಶ ದೊರಕಿದ ಸುರಿಬೈಲು ಹೈಸ್ಕೂಲಿಗೆ ಶಿಕ್ಷಕರೇ ಇಲ್ಲ ಎಂಬ ವಿಚಾರ ಕೆಲ ಹೊತ್ತು ಚರ್ಚೆಗೆ ಕಾರಣವಾಯಿತು. ವಿಷಯ ಪ್ರಸ್ತಾಪಿಸಿದ ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, 83 ಮಕ್ಕಳು ಇರುವ ಕಡೆ ಕೇವಲ ಇಬ್ಬರು ಶಿಕ್ಷಕರು ಇರುವ ಸನ್ನಿವೇಶವೂ ಇದೆ. ಕೆಲವೆಡೆ ಅದೇ ಸಂಖ್ಯೆಗೆ ಆರು ಶಿಕ್ಷಕರು ಇದ್ದಾರೆ. ಇದು ಯಾವ ನ್ಯಾಯ ಎಂದು ಶಿಕ್ಷಣಾಧಿಕಾರಿ ಲೋಕೇಶ್ ಅವರನ್ನು ಪ್ರಶ್ನಿಸಿದರು.

ಸುರಿಬೈಲು ಹೈಸ್ಕೂಲಿಗೆ ಈ ಬಾರಿ ಶಿಕ್ಷಕರ ಕೊರತೆ ನಡುವೆಯೂ ಶೇ.60ರಷ್ಟು ಫಲಿತಾಂಶ ಬಂದಿದೆ. ಇದು ಉತ್ತಮ ಸಾಧನೆಯಾಗಿದೆ. ಆದರೆ ಇಲ್ಲಿಗೆ ಶಿಕ್ಷಕರ ನಿಯೋಜನೆಯಾಗದೆ ಸಮಸ್ಯೆ ಆಗುತ್ತಿದೆ ಎಂದರು. ಇದಕ್ಕೆ ದನಿಗೂಡಿಸಿದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ಯಾವುದೇ ಸವಲತ್ತುಗಳು ಇಲ್ಲದೆ ಉತ್ತಮ ಫಲಿತಾಂಶ ಬಂದಿರುವುದು ಒಂದು ಸಾಧನೆಯೇ ಆಗಿದೆ. ಈ ವರ್ಷವಾದರೂ ಅಧ್ಯಾಪಕರನ್ನು ನೇಮಿಸಿ ಎಂದು ಅಗ್ರಹಿಸಿದರು. ಎಲ್ಲಿ ಕಡಿಮೆ ಶಿಕ್ಷಕರು ಇದ್ದಾರೆಯೋ ಅಲ್ಲೆಲ್ಲ ಭರ್ತಿ ಮಾಡಿ ಎಂದು ಉಪಾಧ್ಯಕ್ಷಅಬ್ಬಾಸ್ ಆಲಿ ಸೂಚಿಸಿದರು.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಮಕ್ಕಳಿರುವ ಕಡೆ ಶಿಕ್ಷಕರ ನಿಯೋಜನೆ ನಡೆಯುತ್ತಿದೆ. ಎರಡು ವಾರಗಳಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ. ಸುರಿಬೈಲು ಶಾಲೆಗೆ ಶಿಕ್ಷಕರ ಹುದ್ದೆಯೇ ಮಂಜೂರಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಶಾಲೆಯೊಂದರಲ್ಲಿ ನಾಡಗೀತೆ, ರೈತಗೀತೆ ಮತ್ತು ರಾಷ್ಟ್ರಗೀತೆ ಹಾಡನ್ನೇ ಮೊಟಕುಗೊಳಿಸಲಾಗುತ್ತಿದೆ ಇದು ಸರಿಯಲ್ಲ ಎಂದು ಹೈದರ್ ಆಕ್ಷೇಪಿಸಿದರು.

ಇಲಿಜ್ವರ ಪತ್ತೆ:

ತಾಲೂಕಿನಲ್ಲಿ ಎರಡು ಪ್ರಕರಣಗಳು ಇಲಿಜ್ವರಕ್ಕೆ ಸಂಬಂಧಿಸಿದ್ದಾದರೆ, 12 ಡೆಂಘ್ಯ ಪ್ರಕರಣ ಪತ್ತೆಯಾಗಿದೆ . ಪುಣಚ ಪರಿಸರದಲ್ಲಿ ಈ ಸಮಸ್ಯೆ ಇದ್ದು ಈಗ ನಿವಾರಣೆಯಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದರು.

ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಲ್ಲಿ ಸದಸ್ಯರೂ ಜನತೆಗೆ ತಿಳಿಹೇಳಬೇಕಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದಾ ಸೂಚಿಸಿದರು.

ಲೈನಸ್ಸ್ ಕೊಡುವಾಗ ಎಚ್ಚರ:

ನಾವು ಶಾಲಾ ಪರಿಸರದಲ್ಲಿ ಹಂದಿ, ಸಾಕಾಣೆ ಬಗ್ಗೆ ಸಮಸ್ಯೆ ಇದೆ ಎಂದು ದೂರು ಕೊಟ್ಟರೆ, ಆರೋಗ್ಯ ಇಲಾಖೆ ನಿರಾಕ್ಷೇಪಣೆ ಪತ್ರ ಕೊಡುತ್ತದೆ. ಆದರೆ ನಮಗೆ ಉತ್ತರವೇ ಇಲ್ಲ.ಇದರಿಂದ ಪಂಚಾಯತ್ ಗಳು ಬಲಿಪಶು ಅಗುತ್ತದೆ ಎಂದು ಪಂ.ಅಧ್ಯಕ್ಷ ಸುಭಾಶ್ಚಂದ್ರ ಅವರು ತಿಳಿಸಿದರು.

ಕೋಳಿ ಅಂಗಡಿ ಸ್ವಚ್ಛತೆ ಕಾಪಾಡಲು ಇಂಗುಗುಂಡಿ ರಚನೆ ಮಾಡಬಹುದು. ಅನುಮತಿಯನ್ನು ಪ್ರತಿಯೊಂದು ಸ್ಥಳ ಪರೀಶೀಲನೆ ನಡೆಸಿ ನೀಡಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಕಲಾಪ ನಡೆಸಿದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ ಉಪಸ್ಥಿತರಿದ್ದರು. ಸಭೆ ಆರಂಭಕ್ಕೆ ಮೊದಲು ಕರೋಪಾಡಿಯಲ್ಲಿ ಹತ್ಯೆಗೀಡಾದ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು.
ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ,ಜಯಶ್ರೀ ಕೊಡಂದೂರು,ಮಂಜುಳ‌ಮಾವೆ,ಉಪಸ್ಥಿತರಿದ್ದರು. ತಾಪಂ ಸದಸ್ಯರಾದ ಹೈದರ್ ಕೈರಂಗಳ, ಆದಂ ಕುಂಞ, ಸಂಜೀವ ಪೂಜಾರಿ, ಮಲ್ಲಿಕಾ ವಿ.ಶೆಟ್ಟಿ, ಯಶವಂತ ಪೂಜಾರಿ, ಗಣೇಶ್ ಸುವರ್ಣ,ನವೀನ ಪೂಜಾರಿ,ಮಹಾಬಲ ಆಳ್ವ,ಕವಿತಾ ನಾಯ್ಕ್, ಮೊದಲಾದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ಅವರನ್ನು ಅವರ ಪುತ್ರ ನವೀನ್ ಭಟ್ ಯುಪಿಎಸ್ ಸಿ ಪರೀಕ್ಷೆಯಲ್ಲಿ ೩೭ನೇ ಕ್ರಮಾಂಕ ಗಳಿಸಿದ್ದಕ್ಕಾಗಿ ಅಭಿನಂದಿಸಲಾಯಿತು.

ಇಒ ಸಿಪ್ರಿಯಾನ್ ಮಿರಾಂದಾ ಕಾರ್ಯಕ್ರಮ ನಿರ್ವಹಿಸಿದರು. ಹತ್ಯೆಯಾದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಅವರ ತಂದೆ ಉಸ್ಮಾನ್ ಕರೋಪಾಡಿಯವರು ಸಭೆಗೆ ಅಗಮಿಸಿ ಸಭೆ ಆರಂಬವಾಗುತ್ತಿದ್ದಂತೆ ತೆರಳಿದರು.

By suddi9

Leave a Reply

Your email address will not be published. Required fields are marked *