ಉಡುಪಿ: ಜೇಸಿಐ ವಲಯ 15 ಇದರ ವಿವಿಧ ಘಟಕಗಳಾದ ಉಡುಪಿ ಇಂದ್ರಾಳಿ,ಪರ್ಕಳ,ಉಡುಪಿ ಸಿಟಿ,ಮಣಿಪಾಲ ಹಿಲ್ ಸಿಟಿ ಮತ್ತು ಕಲ್ಯಾಣಪುರ ಕೋಸ್ಮೋ ಸಿಟಿ ಇದರ ವತಿಯಿಂದ ಟೆಕ್ ಆಫ್ 2017 ತರಬೇತಿ ಕಾರ್ಯಕ್ರಮ ದುರ್ಗಾ ಈಮಟರ್ ನ್ಯಾಷನಲ್ ಹೋಟೆಲ್ ನಲ್ಲಿ ಜೂನ್.11 ರಂದು ನಡೆಯಿತು.ಕಾರ್ಯಕ್ರಮವನ್ನು ವಲಯಾದ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ ಈ ರೀತಿಯ ತರಬೇತಿ ಕಾರ್ಯಕ್ರಮಗಳಿಂದ ಜೇಸಿಯ ವಿಷಯಗಳನ್ನು ಸದಸ್ಯರು ಪಡೆದುಕೊಂಡು ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾದ್ಯ ಎಂದರು.

share_image_temp
ವಲಯ ಉಪಾಧ್ಯಕ್ಷ ಮೋಹನ್ ಎ ಭಾಗವಹಿಸಿದ್ದರು. ತರಬೇತುದಾರ ರಾಜೇಶ್ ಶೆಣ್ಯೆ ಭಾಷಣ ಕಲೆಯ ಬಗ್ಗೆ ತರಬೇತಿ ನೀಡಿದರು.ಅದ್ಯಕ್ಷತೆಯನ್ನು ಉಡುಪಿ ಇಂದ್ರಾಳಿ ಅದ್ಯಕ್ಷೆ ಶರ್ಲಿ ಮನೋಜ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಘಟಕಾದ್ಯಕ್ಷರುಗಳಾದ ಕರುಣಾಕರ ಬಂಗೇರ,ಸುಭಾಷ್ ಬಂಗೇರ,ಸಂದ್ಯಾ,ಆಶಾ ಬಿ ವಲಯಾಧಿಕಾರಿ ಮನೋಜ್ ಕಡಬ ಮುಂತಾದವರಿದ್ದರು.ವಿವಿಧ ಘಟಕದಿಂದ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *