ಬಂಟ್ವಾಳ:ಕಳೆದ ಹಲವು ಸಮಯಗಳಿಂದ ಸಂಚಾರಕ್ಕೆ ಆಯೋಗ್ಯವಾಗಿರುವ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಚಾಲಕ ಸಮುದಾಯ ಗೋಗರೆದರೂ ಇದಕ್ಕೆ ಕನಿಷ್ಠ ಸ್ಪಂದಿಸದ ರಾ.ಹೆ.ಪ್ರಾ.ಇಲಾಖೆ ನಿರ್ಮಾಣ ಹಂತದಲ್ಲಿರುವ ನೂತನ ಬಸ್ ನಿಲ್ದಾಣದ ಮುಂಭಾಗದಲ್ಲಿ ವಾಹನ ಚಾಲಕರನ್ನು ಗೊಂದಲಕ್ಕೆ ತಳ್ಳಿ ಅಪಾಯಕ್ಕೆ ಆಹ್ವಾನಿಸುವ ಕೆಲಸವನ್ನು ಮಾಡಿರುವುದು ಚಾಲಕರ ಸಹಿತ ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಜ್ಜಿಬೆಟ್ಟ ರಸ್ತೆಯ ನಾಗರಿಕರಿಗೆ ಮತ್ತು ವಾಹನಗಳು ತಿರುವ ಪಡೆಯಲೆಂದು ಡಿವೈಡರ ಮಧ್ಯೆ ಸ್ಥಳಾವಕಾಶ ಕಲ್ಲಿಸಲಾಗಿದ್ದು,ಆದೇ ಜಾಗದ ಸುತ್ತ ಶುಕ್ರವಾರ ಸಂಜೆ ಹಠಾತ್ತನೆ ರಸ್ಥೆ ವಿಭಾಜಕ ಕೋನ್ ಗಳನ್ನು ಅಳವಡಿಸಲಾಗಿದ್ದು ,ಎರಡು ಕಡೆಯಿಂದ ಸಂಚರಿಸುವ ವಾಹನ ಸವಾರರು ಗೊಂದಲಕ್ಕೆ ಸಿಲುಕಿ ಪರಾದಾಡಿದ ಪ್ರಸಂಗವು ನಡೆಯಿತು.

IMG-20170616-WA0054 IMG-20170616-WA0055ಮಂಗಳೂರು ಕಡೆಯಿಂದ ಬರುವಂತ ಬಸ್ ,ಲಾರಿ ಸಹಿತ ಎಲ್ಕಾಲಾ ಘನವಾಹನಗಳು ಇಲ್ಲಿ ಬಲಕ್ಕೆ ತಿರುಗಿ ಮೇಲ್ಸತುವೆಯ ಮೂಲಕ ಸಂಚರಿಸುವಂತೆ ಸೂಚನಾಫಲಕ ಹಾಕಲಾಗಿದೆ.ಹಾಗೆಯೇ ಎದುರು ಕಡೆಯಿಂದ ಬರುವ ವಾಹನಗಳು ಎಡಭಾಗದಿಂದಲೇ ನೇರವಾಗಿ ತೆರಳಬೇಕು ,ಇದೀಗ ಇಲ್ಲಿ ವಾಹನ ಸವಾರರು ತಿರುವ ಪಡೆಯಲು ಇಲ್ಲವೆ ಅಜ್ಜಿಬೆಟ್ಟು ರಸ್ತೆಯಲ್ಲಿ ತೆರಳಬೇಕಾದವರು ಇನ್ನು ಮುಂದೆ ಪರದಾಟ ನಡೆಸಬೇಕು ವಿಭಾಜಕ ಕೋನ್ ಮಧ್ಯೆ ತೂರಿಕೊಂಡು ಹೋಗಬೇಕಾಗಿದೆ.ಈಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಬರುವ ಘನ ವಾಹನಗಳು ಬಲಕ್ಕೆ ತೆಗೆದುಕೊಳ್ವಳುವ ವೇಳೆ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ.ರಾತ್ರಿವೇಳೆಯಲ್ಲಂತು ಈವ್ಯವಸ್ಥೆ ಇನ್ನಷ್ಠು ಅಪಾಯಕಾರಿಯಾಗು ವ ಸಾಧ್ತತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಬೇಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಸಂಚರಿಸುವ ಬಸ್ ಮತ್ತಿತರ ಘನ ವಾಹನಗಳ ಸಂಚಾರದ ಭರಾಟೆಗೆ ವಿಭಾಜಕ ಕೋನ್ ಗಳು ನೆಲಸಮವಾದರೂ ಅಚ್ಚರಿಪಡಬೇಕಾಗಿಲ್ಲ. ಬಿ.ಸಿ.ರೋಡಿಗೆ ಅಗತ್ಯವಿಲ್ಲದ ಮೇಲ್ಸತುವೆ ನಿರ್ಮಾಣವಾದಂದಿನಿಂದ ಒಂದಲ್ಲೊಂದು ಸಮಸ್ಯೆ,ಎಡವಟ್ಟುಗಳನ್ನು ರಾಹೆ.ಪ್ರಾ.ಇಲಾಖೆ ಮೈಮೇಲೆ ಎಳೆದುಕೊಂಡಿದೆ.ಅಗತ್ಯವಾಗಿ ಅಗಬೇಕಾದ ಸರ್ವಿಸ್ ರಸ್ತೆ ದುರಸ್ಥಿಯನ್ನು ಮಾಡದ ರಾ.ಹೆ.ಪ್ರಾ.ಇದೀಗ ಮತೊಂದು ಅಪಾಯಕಾರಿ ಸನ್ನಿವೇಶವನ್ನು ಸ್ರಷ್ಠಿಸಿದೆ..

By suddi9

Leave a Reply

Your email address will not be published. Required fields are marked *