ಬಂಟ್ವಾಳ: ಕೊಲೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮನೆಮುಂಭಾಗದ ತೋಟದಲ್ಲಿ ಶನಿವಾರ ಸಂಜೆ ಸಾವಿರಾರು ಸಂಖ್ಯೆಯ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹಾಗೂ ಮುಖಂಡರ ಸಮ್ಮುಖದಲ್ಲಿ ನೆರವೇರಿತು.ಶರತ್ ಅವರ ತಂದೆ ತನಿಯಪ್ಪ ಮಡಿವಾಳರು ಚಿತೆಗೆ ಅಗ್ನಿಸ್ಪರ್ಶಗೈದರು. ಇದರೊಂದಿಗೆ ಶರತ್ ಅವರು ಪಂಚಭೂತಗಳಲ್ಲಿ ಲೀನವಾದರು. ಶರತ್ ಅವರ ಮನೆಮಂದಿ, ಕುಟುಂಬಸ್ಥರು, ಆಪ್ತರು ಈ ಸಂದರ್ಭ ನೆರೆದಿದ್ದರು. ಇದಕ್ಕೂ ಮೊದಲು ಶರತ್ ಅವರ ಪಾರ್ಥಿವ ಶರೀರವನ್ನು ಕಂದೂರು ಮೈದಾನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿತ್ತು. ಊರಿನ ಸಾವಿರಾರು ಮಂದಿ ನಾಗರೀಕರು ಅಂತಿಮದರ್ಶನ ಪಡೆದರು. ಇಲ್ಲೂ ಕೂಡ ಶರತ್ ಅಮರ್ ರ ಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.IMG-20170708-WA0112

* ದೇಶಭಕ್ತರು ಹುಟ್ಟಿಬರಲಿ..
ಇದೇ ವೇಳೆ ಸ್ಥಳದಲ್ಲಿ ಶ್ರದ್ಧಾಂಜಲಿ ಸಭೆಯೂ ನಡೆಯಿತು. ಆರೆಸ್ಸೆಸ್ ನ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ್ ಅವರು ಮಾತನಾಡಿ, ಶರತ್ ಅವರಂತಾ ಸಾವಿರಾಋಉ ದಏಶಭಕ್ತರು ಹುಟ್ಟಿಬರಬೇಕು. ಇಂತಾ ಪರಿಸ್ಥಿತಿಯ ವೇಳೆ ತಾಳ್ಮೆಗೆಡಬಾರದು. ಶಾಂತರೀತಿಯಿಂದ ಇದನ್ನು ಎದುರಿಸಬೇಕು ಎಂದರು. ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಶರತ್ ಒಬ್ಬ ಉತ್ತಮ ಗುಣನಡತೆ ಹಾಘೂ ಸಂಸ್ಕಾರವಂತ ಹುಡುಗನಾಗಿದ್ದು, ಆತನನ್ನು ಕಳೆದುಕೊಂಡಿರುಉದು ತುಂಬಾ ನೋವು ತಂದಿದೆ. ಈ ಘಟನೆಯಿಂದಾಗಿ ಹಿಂದೂಸಮಾಜಕ್ಕೆ ಅನ್ಯಾಯವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಮಡಿವಾಳ ಸಂಘದ ಅಧ್ಯಕ್ಷ ಎಂ.ಕೆ.ಶಿವ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಸಂತೋಷ್ ಕುಮಾರ್ ಬೋಳಿಯಾರ್, ರಾಧಾಕೃಷ್ಣ ಆಳ್ವ, ರಾಜೇರ್ಶ ನಾಯ್ಕ್ ಉಳಿಪಾಡಿಗುತ್ತು, ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಗದೀಶ್ ಅಧಿಕಾರಿ ಮೂಡಬಿದ್ರೆ, ರವೀಂದ್ರ ಕಂಬಳಿ, ಜಿತೇಂದ್ರ ಕೊಟ್ಟಾರಿ, ಸುಲೋಚನಾ ಜಿಕೆ ಔಟ್, ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಶರಣ್ ಪಂಪ್‍ವೆಲ್, ಸತ್ಯಜಿತ್ ಸುರತ್ಕಲ್, ಜಗದೀಶ್ ಶೆಣವ, ಜಿ.ಆನಂದ, ದಿನೇರ್ಶ ಬಂಡಾರಿ, ದೇವದಾಸ ಶೆಟ್ಟಿ, ರಾಮದಾಸ್ ಬಂಟ್ವಾಳ, ಕಮಲಾಕ್ಷಿ ಪೂಜಾರಿ, ಬೃಜೇಶ್ ಚೌಟ ಸೇರಿದಂತೆ ಹಲವಾರು ಗಣ್ಯರು ಮೃತರ ಅಂತಿಮ ಸಂಸ್ಕಾರದ ವೇಳೆ ಭಾಗವಹಿಸಿದ್ದರು. ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು, ಶರತ್ ಅವರ ಮನೆಗೆ ತೆರಳಿ ಹೆತ್ತವರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.

* ಸರ್ಕಾರಕ್ಕೆ ಯೋಗ್ಯತೆಯಿಲ್ಲ..
ನನ್ನ ಮಗನ ಕೊಲೆಗೆ ಸಂಬಂಧಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಂತಾ ಯೋಗ್ಯತೆ ಸರ್ಕಾರಕ್ಕೆ ಇಲ್ಲ ಎಂದು ಶರತ್ ಅವರ ತಂದೆ ತನಿಯಪ್ಪ ಮಡಿವಾಳ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನನ್ನ ಹಾಗೂ ನನ್ನ ಮಗನ ಮೇಲೆ ಇದುವರೆಗೂ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲ. ಈ ವಿಚಾರವನ್ನು ತನ್ನ ವಿಚಾರಣೆ ವೇಳೆ ಜಿಲ್ಲಾಧಿಕಾರಿಯವರ ಮುಂದೆ ಹೇಳಿದ್ದೇನೆ ಎಂದ ಅವರು, ನನ್ನ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುತ್ತಾ ಭಾವಪರವಶರಾದರು. ನನ್ನ ಮಗ ಶ್ರಮಜೀವಿ, ಮನೆಗೆ ಆಧಾರ ಸ್ತಂಭವಾಗಿದ್ದು, ನಮ್ಮೆಲ್ಲಾ ಕಷ್ಟಕ್ಕೆ ಸ್ಪಂದಿಸುತ್ತಿದ್ದ, ಆದರೆ ಇವತ್ತು ಅವನು ಇಲ್ಲಾವಾಗಿದ್ದಾನೆ, ಅವನನ್ನು ಉಳಿಸಲಾಗದಿರುವುದು ನನ್ನ ದುರ್ದೈವ ಎಂದರು.

By suddi9

Leave a Reply

Your email address will not be published. Required fields are marked *