ಬಂಟ್ವಾಳ:ಪ್ರತಿಯೊಬ್ಬ ಮನುಷ್ಯನಿಗೂ ದೇವರ ಧ್ಯಾನದ ಜೊತೆಗೆ ತಪಸ್ಸಿನ ಜ್ಞಾನವೂ ಅಗತ್ಯವಾಗಿದೆ. ಇದಕ್ಕಾಗಿ ಆಡಂಬರದ ಜೀವನಕ್ಕೆ ಬದಲಾಗಿ ದೇವರ ಸಾಕ್ಷಾತ್ಕಾರಕ್ಕಾಗಿ ಪುಣ್ಯ ಸಂಚಯಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧ್ಯಾನ ಮತ್ತು ತಪಸ್ಸಿನ ಜ್ಞಾನಸ್ಸು ಇದು ಮನುಷ್ಯನಿಗೆ ಅಗತ್ಯ ಎಂದು ಮುನಿಶ್ರೀ ವೀರ ಸಾಗರ ಮಹಾರಾಜ ಹೇಳಿದ್ದಾರೆ. ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಚಾತುಮರ್ಾಸ ಪ್ರಯುಕ್ತ ಭಾನುವಾರ ನಡೆದ ಕಲಶ ಸ್ಥಾಪನಾ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಸೋಂದಾ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮದ ಯೋಗ ಎಲ್ಲರೂ ಆಚರಿಸಬೇಕು ಎಂದರು.
ಚಾತುರ್ಮಾಸ ಸಮಿತಿ ಗೌರವ ಸಂರಕ್ಷಕ ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕಲಶ ಸ್ಥಾಪನೆ ನೆರವೇರಿಸಿದರು. ಗೌರವ ಸಂರಕ್ಷಕ ಜಿನರಾಜ ಆರಿಗ ಪಚ್ಚಾಜೆ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಹೊಸಂಗಡಿ ಅರಮನೆ, ಗೌರವ ಸಂರಕ್ಷಕ ಭರತ್ ಕುಮಾರ್ ಬಲ್ಲೋಡಿಗುತ್ತು, ಜಯವರ್ಮರಾಜ್ ಬಲ್ಲಾಳ್, ಪುಷ್ಪರಾಜ್ ಜೈನ್ ಮಂಗಳೂರು, ಚಾತುರ್ಮಾಸ ಸಮಿತಿ ಅಧ್ಯಕ್ಷ ರತ್ನಾಕರ ಜೈನ್ ಮಂಗಳೂರು, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಇಂದ್ರ ಪಾಣೆಮಂಗಳೂರು, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಬಂಟ್ವಾಳ, ಹರ್ಷರಾಜ್ ಬಲ್ಲಾಳ್ ಬಿ.ಸಿ.ರೋಡು, ಆರಾಧನ ಸಮಿತಿ ಸಂಚಾಲಕ ಆದಿರಾಜ್ ಜೈನ್ ಕೊಯಕ್ಕುಡೆ, ಸ್ವಾಗತ ಸಮಿತಿ ಸಂಚಾಲಕ ಸತೀಶ್ ಕುಮಾರ್ ಜೈನ್ ಪಿಲಿಂಗಾಲು, ಸಭಾ ಸಮಿತಿ ಸಂಚಾಲಕ ಡಾ. ಸುದೀಪ್ ಇಂದ್ರ ಸಿದ್ಧಕಟ್ಟೆ, ಆಹಾರ ಸಮಿತಿ ಸಂಚಾಲಕ ರಘುಚಂದ್ರ ಜೈನ್ ವಾಮದಪದವು, ಪ್ರಚಾರ ಸಮಿತಿ ಸಂಚಾಲಕ ಸುಕುಮಾರ್ ಬಲ್ಲಾಳ್, ಪುರೋಹಿತ ಸಮಿತಿ ಸಂಚಾಲಕ ಅಜಿತ್ ಕುಮಾರ್ ಇಂದ್ರ ಹಚ್ಚಾಡಿ ಬಸದಿ ಮತ್ತಿತರು ಇದ್ದರು.ಸಮಿತಿ ಅಧ್ಯಕ್ಷ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ, ವಂದಿಸಿದರು.