ಬಂಟ್ವಾಳ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಿ.ಶರತ್ ಅವರ ನಿವಾಸಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶರತ್ ಅವರ ತಂದೆ ತನಿಯಪ್ಪ ,ತಾಯಿ ,ಸಹೋದರಿಯರಿಗೆ ದೈರ್ಯತುಂಬಿದ ಬಿಎಸ್ ವೈ ಅವರು ಶರತ್
ಕುಟುಂಬಕ್ಕೆ ವಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ಪರಿಹಾರವನ್ನು ಹಸ್ತಾಂತರಿಸಿದರು.ಈ ಸಂದರ್ಭ ಶರತ್ ತಂದೆ ತನಿಯಪ್ಪ ರವರು ,ನಾನು ಸಾಯುವುದಕ್ಕೆ ಮೊದಲು ಮಗನ ಕೊಲೆಗಾರರನ್ನು ಬಂಧಿಸಿ ಶಿಕ್ಷೆಯಾಗಬೇಕು ಎಂದು ಕಣ್ಣೀರಿಟ್ಟರು.ನೀವು ದ್ರತಿಗೇಡಬೇಡಿ ಎಂದು ಬಿಎಸ್ ವೈ ಧೈರ್ಯತುಂಬಿದರು.ಶರತ್ಅವರ ತಂದೆ,ತಾಯಿ,ಸಹೋದರಿಯರ ಕಣ್ಣೀರಿನಿಂದ ಬಿಎಸ್ ವೈ ಗದ್ಗಿತರಾದರು.ಶರತ್ ಸಂಘದ ಪ್ರಾಮಾಣಿಕ ಕಾರ್ಯಕರ್ತನಾಗಿದ್ದ,

1 (1)ಸಂಘ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಈ ಸಂದರ್ಭ ಬಿಎಸ್ ವೈರವರಲ್ಲಿ ತಿಳಿಸಿದರು. ಸಿ ಎಂ ಗೆ ನೈತಿಕತೆಇಲ್ಲ ; ಸುದ್ದಿಗಾರರೊಂದಿಗೆ ಮಾತನಾಡಿದ ಬಿ ಎಸ್ ವೈ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ.ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಆಸ್ಪತ್ರೆಗೆ ಭೇಟಿ ನೀಡದ ಮುಖ್ಯಮಂತ್ರಿಯವರು ರಾಜಕೀಯ ಲಾಭಕ್ಕಾಗಿ ಸಮಾವೇಶ ನಡಸಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ನಡೆದಿರುವ ೨೪ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸಬೇಕು,,ಕೆಎಫ್ ಡಿ,ಪಿಎಫ್ ಐ ಸಂಘಟನೆಯನ್ನು ನಿಪೇಧಿಸಬೇಕು ಎಂದ ಅವರು ಕಾಂಗ್ರೆಸ್ನವರಿಗೆ ಶಾಂತಿ ಬೇಕಾಗಿಲ್ಲ ,ಶರತ್ ಕೊಲೆ ಆರೋಪಿಗಳನ್ನು ಬಂಧಿಸುವ ಬದಲು ಡಾ.ಪ್ರಭಾಕರ ಭಟ್ ಅವರನ್ನು ಬಂಧಿಸಲು ಸೂಚನೆ ನೀಡುತ್ತಿದ್ದಾರೆ.

3ಜಿಲ್ಲೆಯ ಸಚಿವರುಗಳು ಮತ್ತೆ ಗೊಂದಲ ಸ್ರಷ್ಠಿಸಲು ಶಾಂತಿಭೆ ಕರೆದಿದ್ದು, ಇದನ್ನು ಬಹಿಪ್ಕರಿಸಲು ಬಿಜೆಪಿ ನಿಶ್ಚಯಿಸಿದೆ ಎಂದರು. ಬಿಜೆಪಿಗೆ ಜನಬಲ,ಕಾರ್ಯಕರ್ತರಬಲವಿದ್ದು,ಮುಂದಿನ ಚುನಾವಣೆಯಲ್ಲಿ ಕಾಂಗ್ರಸ್ ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆಎಂದರು.ಈಸಂದರ್ಭ ಸಂಸದರಾದ ನಳಿನ್ ಕುಮಾರ್ ಕಟೀಲ್,ಶೋಭಾ ಕರಂದ್ಲಾಜೆ,ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು,ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಪದ್ಮನಾಭಕೊಟ್ಟಾರಿ,ಪ್ರಭಾಕರ ಬಂಗೇರ,ನಾಗರಾಜ ಶೆಟ್ಟಿ,ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಸದಸ್ಯ ರವೀಂದ್ರಕಂಬಳಿ ,ಪಕ್ಷದ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿ,ದೇವದಾಸ ಶೆಟ್ಟಿ,ದಿನೇಶ್ ಅಮ್ಟೂರು ಬ್ರಿಜೇಷ್ ಚೌಟ,ಮೋನಪ್ಪ ದೇವಸ್ಯ,ರಾಮದಾಸ ಬಂಟ್ವಾಳ,ಚೆನ್ನಪ್ಪ ಕೋಟ್ಯಾನ್ ಹಾಗೂ ಸ್ಥಳೀಯ ಪ್ರಮುಖರು ಹಾಜರಿದ್ದರು . ಡಾ.ಭಟ್-ಬಿಎಸ್ ವೈ ರಹಸ್ಯ ಚರ್ಚೆ; ಇದಕ್ಕೂ ಮೊದಲು ಬಿಎಸ್ ವೈ ಅವರು ಸಜೀಪದಲ್ಲಿರುವ ಶಿಶುಮಂದಿರದಲ್ಲಿ ಅರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಅವರೊಂದಿಗೆ ಕೆಲ ಹೊತ್ತುಗಳ ಕಾಲ ರಹಸ್ಯ ಮಾತುಕತೆ ನಡೆಸಿ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದರು.

By suddi9

Leave a Reply

Your email address will not be published. Required fields are marked *