ಬಂಟ್ವಾಳ: ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಅವರು ಬಂಟ್ವಾಳ ತಾಲೂಕಿನಲ್ಲಿ ನಡೆದ ಎರಡು ಕೊಲೆ ಕೃತ್ಯಗಳು ಸಂಭವಿಸಿದ ಜಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.ಮೊದಲು ಬೆಂಜನಪದವಿನಲ್ಲಿ ನಡೆದ ರಿಕ್ಷಾ ಚಾಲಕ ಅಶ್ರಫ್ ಹಾಗೂ ಬಿ.ಸಿ.ರೋಡಿನಲ್ಲಾದ ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಕೊಲೆ ಪ್ರಕರಣದ ಸ್ಥಳ ಪರಿಶೀಲನೆ ನಡೆಸಿ ಬಳಿಕ ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷರಾಗಿದ್ದ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈಸಂದರ್ಭ ಎಡಿಜಿಪಿ ಅಲೋಕ ಮೋಹನ್ , ಐಜಿಪಿ ಹರಿಶೇಖರನ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ.ಕೆ.ಅರುಣ್, ಎಡಿಶನಲ್ ಎಸ್ಪಿ ವಿಷ್ಣುವರ್ಧನ, ಇನ್ಸ್ ಪೆಕ್ಟರ್ ಬಿ.ಕೆ.ಮಂಜಯ್ಯ ,ಎಸ್ ಐ ರಕ್ಷೀತ್ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.
ಇಣುಕಿದಾಗ ರಕ್ತದ ಮಡವಿನಲ್ಲಿದ್ದ : ಪ್ರವೀಣ್ ಶರತ್ ನನ್ನ ಆತ್ಮೀಯ ಸ್ನೇಹಿತ ಜು.4 ರಂದು ರಾತ್ರಿ ಸರಿ ಸುಮಾರು 9.30 ರಹೊತ್ತಿಗೆ ಅಂಗಡಿ ಬಾಗಿಲು ಮುಚ್ಚಲೆಂದು ಅಣಿಯಾಗುತ್ತಿದ್ದೆ, ಅಗ ಒಂದು ಸದ್ದು ಕೇಳಿಸಿತು. ನಾನು ಅಂಗಡಿಯಿಂದ ಹೊರ ಬಂದು ಶರತ್ ಏನಾಯಿತು? ಎಂದು ಎರಡು ಬಾರಿ ಕೇಳಿದ್ದೆ. ಆದರೆ ಶರತ್ ಅಂಗಡಿಯಿಂದ ಯಾವುದೇ ಧ್ವನಿ ಬರಲಿಲ್ಲ,ಹಾಗೆ ಸ್ವಲ್ಪ ಅನುಮಾನಗೊಂಡು ಅತನ ಅಂಗಡಿ ಬಳಿ ಬಂದು ಮತ್ತರಡು ಬಾರಿ ಕರೆದಾಗಲೂ ಶರತ್ ನ ಧ್ವನಿ ಕೇಳಿಸಲಿಲ್ಲ ಯಾವಾಗಲೂ ಒಮ್ಮೆ ಕರೆದಾಗಲೇ ಹೊರಬರುವಾತ ಇವತ್ತೇನು ಸ್ವರ ಕೇಳುತ್ತಿಲ್ಲ ಎಂದು ಅಂಗಡಿಯೊಳಗೆ ಇಣುಕಿ ನೋಡಿದಾಗ ಶರತ್ ಇಸ್ತ್ರಿ ಬಟ್ಟೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ, ಎಂದು ಶರತ್ ಹತ್ಯೆ ನಡೆದ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ, ಶರತ್ ಅವರ ಉದಯ ಲಾಂಡ್ರಿ ಪಕ್ಕದಲ್ಲೇ ಇರುವ ಅಂಗಡಿ ಮಾಲಕ ಪ್ರವೀಣ್ ರಾಜ್ಯ ಪೊಲೀಸ್ಮಹಾನಿರ್ದೇಶಕ ಕೆ.ಅರ್ ದತ್ತಾ ಅವರೆದುರು ಹೇಳಿದರು.
ಇದರಿಂದ ಗಲಿ ಬಿಲಿಗೊಂಡ ನಾನು ರಸ್ತೆಯ ಆ ಬದಿಯಲ್ಲಿದ್ದವರನ್ನು ಹಾಗೂ ರವೂಫ್ ರವರನ್ನು ಕರೆದೆ. ಶರತ್ ನ ಕುತ್ತಿಗೆ ಭಾಗದಲ್ಲಿ ಗಂಭೀರವಾದ ಗಾಯವಾಗಿತ್ತು. ಅತನ ಕಾರಿನಲ್ಲೆ ಅಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದೆ ಆದರೆ ಕಾರಿನ ಕೀ ತಕ್ಷಣಕ್ಕೆ ಸಿಗಲಿಲ್ಲ. ಅಗ ರವೂಫ್ ರವೂಫ್ ಆಟೋರಿಕ್ಷಾದಲ್ಲಿ ಶರತ್ ನನ್ನು ಆಸ್ಪತ್ರೆಗೆ ಸಾಗಿಸಿದೆವು ಎಂದು ವಿವರಿಸಿದರು.
ಶರತ್ ನನ್ನು ಕೂಗಿಕೊಂಡು ಅಂಗಡಿಯಿಂದ ಹೊರಬಂದಾಗ ಒಬ್ಬಾತ ತಡೆಬೇಲಿಯೊಳಗಿನಿಂದ ನುಸುಳಿಕೊಂಡು ಓಡಿದ್ದ. ಇಬ್ಬರು ಮೇಲ್ಸತುವೆಯಲ್ಲಿ ಮಾಣಿ ಕಡೆಗೆ ಮುಖ ಮಾಡಿ ಚಾಲನೆ ಸ್ಥಿತಿಯಲ್ಲಿದ್ದ ಬೈಕ್ ನಲ್ಲಿ ಇಬ್ಬರಿದ್ದು ಹೆಲ್ಮಟ್ ಧರಿಸಿದ್ದರು. ಓಡಿ ಹೋದಾತ ಬೈಕಲ್ಲಿ ಕುಳಿತು ಹೋಗಿದ್ದಾರೆ. ಅವರ ಮುಖ ಪರಿಚಯವಿಲ್ಲ. ಕತ್ತಲೆಯಲ್ಲಿ ಅವರ ಗುರುತು ಹಿಡಿಯಲು ಅಗಲಿಲ್ಲ ಎಂದು ಪ್ರವೀಣ್ ಡಿಐಜಿ ಮುಂದೆ ಹೇಳಿಕೆ ನೀಡಿದರು. ಈ ಸಂದರ್ಭ ರವೂಫ್ ಉಪಸ್ಥಿತರಿದ್ದರು.