ಬಂಟ್ವಾಳ :ಪೆರಾಜೆ ಗ್ರಾಮದ ಮಿತ್ತಪೆರಾಜೆ ಬೊಳ್ಳುಕಲ್ಲು ಎಂಬಲ್ಲಿ ಗುಡ್ಡಚಾಮುಂಡೇಶ್ವರಿ ಸೇವಾ ಟ್ರಸ್ಟ್ ಇದರ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ಶ್ರೀದೇವಿ ಭಜನಾ ಮಂದಿರವನ್ನು ಜು.14 ರಂದು ಕಡೇಶ್ವಾಲ್ಯ ಅರ್ಚಕ ವೇದಮೂರ್ತಿ ಶ್ರೀಹರಿ ಭಟ್ ಕಡೆಶ್ವಾಲ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಪೂರ್ವಾಹ್ನ ವಾಸ್ತು ಪೂಜೆ, ಗಣಹೋಮ ಬಳಿಕ ಶ್ರೀದೇವಿ ಪ್ರತಿಷ್ಟಾಪನೆ ಹಾಗೂ ಪ್ರಾರ್ಥನಾ ಸಂಕಲ್ಪವನ್ನು ನೆರವೇರಿಸಿದರು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನೆರವೇರಿತು.peraje bajanamandira

ವನಿತಾ ಸಮಾಜ ಉಪ್ಪಿನಂಗಡಿ , ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇರಳೆಕಟ್ಟೆ, ಶ್ರೀರಾಮ ಭಜನಾ ಮಂಡಳಿ ಕಲ್ಲಡ್ಕ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕರಿಂಕ, ಶ್ರೀ ಶಾರದಾಂಬ ಭಜನಾ ಮಂಡಳಿ ಮಾಣಿ, ವಿನಾಯಕ ಭಜನಾ ಮಂಡಳಿ ನಂದಾವರ, ವಿಷ್ಣಮೂರ್ತಿ ಭಜನಾ ಮಂಡಳಿ ಪೆರಾಜೆ ಇವರು ಭಜನಾ ಸೇವೆಯನ್ನು ನೆರವೇರಿಸಿಕೊಟ್ಟರು. peraje bajana mandira
ಈ ಸಂದರ್ಭದಲ್ಲಿ ಪೆರಾಜೆಗುತ್ತು ಶ್ರೀಕಾಂತ ಆಳ್ವ , ಜಯರಾಮ ರೈ, ಅಪ್ರಾಯ ಪೈ ಬುಡೋಳಿ, ಜಯಾನಂದ ಪೆರಾಜೆ ,ತಾ.ಪಂ. ಸದಸ್ಯೆ ಮಂಜುಳ ಕುಶಾಲ ಪೆರಾಜೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಗುಲಾಬಿ, ಸದಸ್ಯ ಉಮೇಶ್ ಎಸ್.ಪಿ, ಶ್ರೀನಿವಾಸ ಪೂಜಾರಿ, ಮಾಜಿ ಸದಸ್ಯ ಲಿಂಗಪ್ಪ ಮೂಲ್ಯ , ನಾರಾಯಣ ಎಮ್.ಪಿ ಪಾಳ್ಯ, ಕಾಡೂರು ಶಿವರಾಮ ಭಟ್ , ರಾಜರಾಮ ಕಾಡೂರು, ಬಿ.ಟಿ.ನಾರಾಯಣ ಭಟ್ , ಚಂದ್ರಹಾಸ ಶೆಟ್ಟಿ ಬುಡೋಳಿ ಗುತ್ತು, ರಾಜಾರಾಮ ಕಾಡೂರು, ನಾರಾಯಣ ಭಟ್, ಮುರಗಜೆ ಕೃಷ್ಣ ಭಟ್,ಭಾರತಿ ಜೆ.ಪಿ. ,ಪುಷ್ಪರಾಜ ಚೌಟ ಮಾಣಿ, ದೂಮಣ್ಣ ಗೌಡ, ಉಪಸ್ಥಿತರಿದ್ದರು. ಸ್ಥಳ ದಾನದ ಮಾಡಿದ ಮೈಂದಗುರಿ ನಾರಾಯಣ ಮೂಲ್ಯ ಮತ್ತು ಮಿತ್ತ ಪೆರಾಜೆ ನಾರಾಯಣ ಮೂಲ್ಯ ಇವರನ್ನು ಅಭಿನಂದಿಸಲಾಯ್ತು.

By suddi9

Leave a Reply

Your email address will not be published. Required fields are marked *