ಬಂಟ್ವಾಳ, : ನೂರು ರೂಪಾಯಿಗೆ ಬೆಳಗ್ಗೆ, ಸಂಜೆಯ ಉಪಹಾರ ಮತ್ತು ಮಧ್ಯಾಹ್ನ, ರಾತ್ರಿಯ ಊಟ ಆಗಬೇಕು. ಒಂದು ದಿನದ ಖರ್ಚಿಗೆ ನೂರು ರೂಪಾಯಿ ನೀಡುತ್ತಿರುವುದು ಯಾರಿಗೆ ಎಂದು ಯೋಚಿಸುತ್ತಿದ್ದಾರ?
ಹೌದು… ನಂಬಲು ಅಸಾಧ್ಯವಾಗಿದ್ದರೂ ಇದು ಸತ್ಯ. ಒಂದೂವರೆ ತಿಂಗಳಿನಿಂದ ಬಂಟ್ವಾಳದಲ್ಲಿ ಹಗಲು ರಾತ್ರಿ ಭದ್ರತೆಯಲ್ಲಿರುವ ಪೊಲೀಸರ ಅವಸ್ಥೆ ಇದು. ಮಳೆ, ಚಳಿಯ ನಡುವೆ ಬಂಟ್ವಾಳದ ರಸ್ತೆಗಳಲ್ಲಿ ಬೀಡು ಬಿಟ್ಟುವರ ಪೊಲೀಸರಿಗೆ ನಿದ್ದೆ ಅಂತೂ ಇಲ್ಲ. ತಿನ್ನಲು ಆದರೂ ಸರಿಯಾಗಿ ಊಟ, ತಿಂಡಿ ಇದೆಯಾ? ಅದೂ ಇಲ್ಲ. ನೂರು ರೂಪಾಯಿಯಲ್ಲಿ ಗುಣಮಟ್ಟದ ಮತ್ತು ಹೊಟ್ಟೆತುಂಬಾ ಊಟ ನಿಡಲು ಸಾಧ್ಯವಾ ?
ಕೋಮು ಘರ್ಷಣೆಯಿಂದ ನಲುಗಿರುವ ಬಂಟ್ವಾಳ ತಾಲೂಕಿನಲ್ಲಿ ಸಾವಿರಾರು ಪೊಲೀಸರು ಭದ್ರತೆಯಲ್ಲಿದ್ದಾರೆ. ಶಾಲೆ, ಮದುವೆ ಮಂಟಪ, ದೇವಸ್ಥಾನನಗಳೇ ಇವರಿಗೆ ಆಶ್ರಯ ತಾಣವಾಗಿದೆ. ಇಲ್ಲಿ ಸ್ನಾನ, ನಿದ್ದೆ, ಬಟ್ಟೆ ಒಗೆಯುವ ಪೊಲೀಸರು ಸಾರ್ವಜನಿಕರ ಹಿತದೃಷ್ಟಿಯಿಂದ, ಸಮಾಜದ ಸಾಮರಸ್ಯಕ್ಕಾಗಿ ಹಗಲು ರಾತ್ರಿ ಎನ್ನದೆ ಬಂಟ್ವಾಳದಲ್ಲಿ ಭದ್ರತೆಯಲ್ಲಿದ್ದಾರೆ. 
ತಲಾ ಒಬ್ಬ ಪೊಲೀಸ್ಗೆ ಒಂದು ದಿನಕ್ಕೆ ಸರಕಾರ ನೂರು ರೂಪಾಯಿ ನೀಡುತ್ತಿದೆ. ಆ ನೂರು ತೂಪಾಯಿಯಲ್ಲ ಬೆಳಗ್ಗೆ, ಸಂಜೆಯ ಉಪಹಾರ, ಮಧ್ಯಾಹ್ನ, ರಾತ್ರಿಯ ಊಟ ಆಗಬೇಕು. ಇಂದು ಬಂಟ್ವಾಳದಲ್ಲಿ ಬೆಳಗ್ಗೆ ಮತ್ತು ಸಂಜೆಯ ಉಪಹಾರಕ್ಕೆ ನೂರು ರೂಪಾಯಿ ಊಟ ಮಾಡಿ ಕೊಡುವ ಯಾವ ಕ್ಯಾಟರಿಂಗ್ ಮಾಲಕರು ಮುಂದೆ ಬರುತ್ತಿಲ್ಲ, ಇಲ್ಲಿನ ಪೋಲೀಸರ ಮುಲಾಜಿಗೆ ಮಾತ್ರ ಇಲ್ಲಿನ ಒರ್ವಕ್ಯಾಟರಿಂಗ್ ಮಾಲಕರು ಪೋಲೀಸರಿಗೆ ಊಟದ ವ್ಯವಸ್ಥ ಕಳೆದ 50ದಿನಗಳಿಂದ ಮಾಡಿಕೊಡುತ್ತಿದ್ದಾರೆ. ಸರಕಾರದ ಹಣ ಮಂಜೂರಾಗುವದು ನಿಮಗೂ ಗೊತ್ತೆ ಅಲ್ವ. ತಿಂಗಳುಗಟ್ಟಲೆ ಕಾಲ ಈ ಹಣಕ್ಕಾಗಿ ಕಾಯಬೇಕು. ದಿನದ ಎರಡು ಸಮಯದ ಊಟ, ಚಾ, ಉಪಹಾರಕ್ಕೆ ಕೇವಲ ನೂರು ರೂಪಾಯಿ ನೀಡುತ್ತಿರುವುದು ಸರಕಾರ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಾಗಿದೆ.