ಬಂಟ್ವಾಳ:ತಾಲೂಕಿನ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಸೆಕ್ಷನ್ ೧೪೪ ನಿಷೇದಾಜ್ಙೆ ಜಾರಿಗೊಳಿಸಿ ಆರ್ಧಶತಕ ಪೂರೈಸಿರುವುದು ದಾಖಲಾಗಿದೆ.ಶನಿವಾರಕ್ಕೆ ನಿಷೇದಾಜ್ಙೆ ಜಾರಿಯಾಗಿ ೫೧ ನೇ ದಿನಕ್ಕೆ ಕಾಲಿಟ್ಟಿದೆ.ಇಡೀ ದ.ಕ.ಜಿಲ್ಲೆಯಲ್ಲೆ ಬಂಟ್ವಾಳ ತಾಲೂಕಿನಲ್ಲಿ ಇಷ್ಟೊಂದು ಸುದೀರ್ಘ ಅವಧಿಗಳ ಕಾಲ ನಿಷೇದಾಕಜ್ಙೆಯನ್ನು ವಿಧಿಸಿರುವುದು ಕೂಡ ಇದೇ ಮೊದಲಾಗಿದೆ.ಕಲ್ಲಡ್ಕದಲ್ಲಿ ಮೇ. ೨೬ರಂದು ನಡೆದ ಇಬ್ಬರ ನಡುವಿನ ಜಗಳ ನಡೆದ ಬಳಿಕ ಉಂಟಾದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ನಿಷೇದಾಜ್ಙೆ ಜಾರಿಗೊಳಿಸಲಾಗಿತ್ತು.ಇದಾದ ನಂತರ ಕಮೀಷನರ್ ವ್ಯಾಪ್ತಿಯನ್ನು ಹೊರತು ಪಡಿಸಿ ಜಿಲ್ಲೆಯಾದ್ಯಂತ ಸೆಕ್ಷನ್ ಹಾಕಲಾಯಿತು. ಕಳೆದೊಂದುವರೆ ತಿಂಗಳಿನಲ್ಲಿ ಸುಮಾರು ೪ ಬಾರಿ ನಿಷೇದಾಜ್ಙೆಯನ್ನು ವಿಸ್ತರಿಸಲಾಗಿದ್ದು,ಇದೀಗ ಜು.೨೧ರವರೆಗೆ ಜಾರಿಯಲ್ಲಿದೆ.ಸಾಮಾನ್ಯವಾಗಿ ಸೆಕ್ಷನ್ ಜಾರಿಯಲ್ಲಿರುವ ಸಂದರ್ಭ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ,ಸಭೆ,ಸಮಾರಂಭ,ಪ್ರತಿಭಟನೆಗಳಿಗೂ ಅವಕಾಶವಿರುವುದಿಲ್ಲ, ಅಹಿತಕರ ಘಟನೆಗೆ ಕಾರಣವಾಗಂತ ಯಾವುದೇ ಶಸ್ತ್ರಾಸ್ತ್ರವನ್ನು ಒಯ್ಯವುದಾಗಲೀ ಇಟ್ಟುಕೊಳ್ಳವಂತಯೂ ಇಲ್ಲ,,ಅದರೆ ಸೆಕ್ಷನ್ ಜಾರಿಯಲ್ಲಿರುವಾಗಲೇ ಬೆಂಜನಪದವಿನಲ್ಲಿ ರಿಕ್ಷಾ ಚಾಲಕ ಅಶ್ರಫ್ ಹಾಗೂ ಬಿ.ಸಿ.ರೋಡಿನಲ್ಲಿ ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಎಂಬವರ ಕೊಲೆಗಳಾಗಿದೆ.ಮುಂದುವರಿದ ಭಾಗವಾಗಿ ಅಹಿತಕರ ಘಟನೆಗಳು ನೆಡೆದಿತ್ತು.ಇದೀಗ ಬಂಟ್ವಾಳ ತಾಲೂಕು ಸಂಪೂರ್ಣ ಸಹಜ ಸ್ಥಿತಿಯಲ್ಲಿದೆ.IMG-20170708-WA0125

ಪ್ರಸ್ತುತ ಸೆಕ್ಷನ್ ಇದ್ದರೂ ಜನರಿಗೆ ಅದರ ಅನುಭವಕ್ಕೆ ಬಾರದಂತಿದೆ.ಜನಸಾಮಾನ್ಯರು ನೆಮ್ಮದಿಯಿಂದ ತಮ್ಮ ದೈನಂದಿನ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.ಅದರೆ ಬೊಬ್ಬೆ ಹಾಕುವವರಿಗೆ ಇದರಿಂದಲೇ ಬೇಳೆ ಬೇಯಿಸುವವರಿಗಷ್ಠೆ ಸೆಕ್ಷನ್ ದೊಡ್ಡ ವಿಷಯವಾಗಿ ಕಾಣಿಸುತ್ತಿದೆ.ಸದ್ಯ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳ ಬಂಧನ ಕಾರ್ಯ ನಡೆಯದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂಗತಿಯಾಗಿದೆ.ಪೊಲೀಸರ ವಿಶೇಷ ತಂಡ,ಡಿಸಿಐಬಿ ತಂಡ ಆರೋಪಿಗಳ ಪತ್ತೆ ಕಾರ್ಯದಲ್ಲಿ ನಿರತವಾಗಿದ್ದು,ಹಲವರನ್ನು ವಿಚಾರಣೆಗೊಳಪಡಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅರ್.ಕೆ.ದತ್ತಾ ಅವರೇ ಖುದ್ದು,ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶರತ್ ಹಂತಕರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು,ಪೊಲೀಸರು ಮಾತ್ರ ಇದನ್ನು ಅಲ್ಲಗಳೆಯುತ್ತಿದ್ದಾರೆ.

ಪೊಲೀಸರು ಬೀದಿಯಲ್ಲಿ: ಕಳೆದೊಂದುವರೆ ತಿಂಗಳಿನಿಂದ ರಾಜ್ಯದ ವಿವಿಧ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ತಾಲೂಕಿನಲ್ಲಿ ಬೀಡು ಬಿಟ್ಟಿದ್ದಾರೆ.ಅರೆಸೇನಾಪಡೆಯೂ ಬಂದೊಬಸ್ತಿನಲ್ಲಿ ನಿರತವಾಗಿದ್ದಾರೆ.
ಇವರಿಗೆಲ್ಲಾ ಉಳಕೊಳ್ಳಲು ಬಿ.ಸಿ.ರೋಡಿನಲ್ಲಿರುವ ವಿವಿಧ ಮದುವೆ ಸಭಾಂಗಣವನ್ನು ಒದಗಿಸಲಾಗಿದೆ.ಕ್ಯಾಟರಿಂಗ್ ನಲ್ಲಿ ಊಟೋಪಾಚಾರದ ವ್ಯವಸ್ಥೆ ಮಾಡಲಾಗಿದೆ.ರಾತ್ರಿ ಹಗಲೇನ್ನದೆ ತಾಲೂಕಿನ ಜನರ ರಕ್ಷಣಾಕಾರ್ಯದಲ್ಲಿ ತೊಡಗಿಸಿರುವ ಪೊಲೀಸರ ಪಾಡು ಅಯ್ಯೋ ಅನಿಸುತ್ತಿದೆ.ಕೆಲಪೊಲೀಸರು ಮರಳಿ ತಮ್ಮ ಊರಿನತ್ತ ತೆರಳಿದರೆ ಇದಕ್ಕೆ ಬದಲಿಯಾಗಿ ಕೆಲ ಪೊಲೀಸ್ ಸಿಬ್ಬಂದಿಗಳು ಅಗಮಿಸಿದ್ದಾರೆ.ಇತ್ತ ರಾಜಕೀಯ ನೇತಾರರು ಪರಸ್ಸರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದರೆ,ಜನತೆ ಶಾಂತಿ ಬಯಸುತ್ತಿದ್ದು, ಜಾರಿಯಲ್ಲಿರುವ ಸೆಕ್ಷನ್ ಸಡಿಲಿಸಿ ಎನ್ನುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *