ಪೊಳಲಿ: ಶ್ರೀ ದುರ್ಗಾ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿದ್ದು ಆ ಪ್ರಯುಕ್ತ ದೇವಾಲಯದ ಪ್ರಾಂಗಣದಲ್ಲಿ ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ನಿತ್ಯ ಒಂದು ಗಂಟೆ ಭಜನಾ ಸಂಕೀರ್ತನೆಗಳು ನಡೆಯುತ್ತಿವೆ.DSC_4075

ಜಿಲ್ಲೆಯ ಪ್ರಸಿದ್ಧ ಭಜನಾ ತಂಡಗಳು ಈ ಪುಣ್ಯ ಕಾರ್ಯದಲ್ಲಿ ನಿರತವಾಗಿದ್ದು ನಿತ್ಯ ಸಂಜೆ 5:30 ರಿಂದ 7 ಘಂಟೆಯ ವರೆಗೆ ಭಜನಾ ಸಂಕೀರ್ತನೆಗಳನ್ನು ನಡೆಸಲಾಗುತ್ತಿದೆ. ಈ ಹಿಂದೆ ನಡೆದ ದೇವಾಲಯಕ್ಕೆ ಸಂಬಂಧಪಟ್ಟ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಾಲಯದ ಸಾನಿಧ್ಯ ವೃದ್ಧಿಗಾಗಿ ದೇವಾಲಯದಲ್ಲಿ ಸೇವಾ ಕಾರ್ಯಗಳು ಸಿರಂತರವಾಗಿರಬೇಕೆಂಬ ಕಾರಣದಿಂದಾಗಿ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾವಿರ ಸೀಮೆಯ ಭಕ್ತಾದಿಗಳು ಬಹಳ ಉತ್ಸುಕತೆಯಿಂದ ದೇವಾಲಯದ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ . ಜೊತೆಯಲ್ಲೇ ದೇವಾಲಯದ ನವೀಕರಣ ಕಾರ್ಯವು ಭರದಿಂದ ಸಾಗಿದ್ದು ಕಾಮಾಗಾರಿ ಕ್ಲಪ್ತ ಸಮಯಕ್ಕೆ ಮುಕ್ತಾಯವಾಗುವ ನಿರೀಕ್ಷೆಯಿದೆ.

By suddi9

Leave a Reply

Your email address will not be published. Required fields are marked *