ಬಂಟ್ವಾಳ:ತಾಲೂಕಿನ ರಾಯಿ ಗ್ರಾಮದ ಸೀತಾಳ ಎಂಬಲ್ಲಿ ಇಲ್ಲಿನ ನಿವಾಸಿ ಸುಂದರಿ ಸಪಲ್ಯ ಎಂಬವರು ಬಿ.ಸಿ.ರೋಡ್‍ನಲ್ಲಿ ಈಚೆಗೆ ಖರೀದಿಸಿದ್ದ ಹೊಸ ಗ್ರೈಂಡರ್ ಮನೆಯಲ್ಲಿ ಸೋಟಗೊಂಡಿಲ್ಲ. ಅಂದು ಅವರು ವಿದ್ಯುತ್ ಸಂಪರ್ಕ ತಪ್ಪಿಸಿ ಶುಚಿಗೊಳಿಸಿದ ಬಳಿಕ ಗ್ರೈಂಡರ್ ಮೇಲೆ ಮುಚ್ಚಲಾಗಿದ್ದ ಬಟ್ಟೆಗೆ ಪಕ್ಕದಲ್ಲೇ ಉರಿಯುತ್ತಿದ್ದ ಕಟ್ಟಿಗೆ ಒಲೆಯಿಂದ ಬೆಂಕಿ ತಗುಲಿದ ಪರಿಣಾಮ ಗ್ರೈಂಡರ್ ಹೊರ ಭಾಗದ ಫೈಬರ್ ಕವಚ ಮಾತ್ರ ಸುಟ್ಟು ಕರಕಲಾಗಿದೆ ಎಂದು ವಿಜಯಲಕ್ಷ್ಮಿ ಹೋಂ ಎಪ್ಲಯನ್ಸಸ್ ಕಂಪೆನಿ ಸ್ಪಷ್ಟಪಡಿಸಿದೆ. 17btl-Grinder
ಈ ಬಗ್ಗೆ ಕಂಪೆನಿ ತಂತ್ರಜ್ಞರ ತಂಡವು ಶುಕ್ರವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ತಿಳಿದು ಬಂದಿದೆ. ಗ್ರೈಂಡರ್ ಸ್ಪೋಟಗೊಂಡಿದ್ದರೆ ಅದರ ಬಿಡಿಭಾಗ ಚೆಲ್ಲಾಪಿಲ್ಲಿಯಾಗಿ ಹರಡಬೇಕಿತ್ತು. ಉಳಿದಂತೆ ಗ್ರೈಂಡರ್‍ನ ಯಾವುದೇ ಭಾಗಕ್ಕೆ ಹಾನಿಯಾಗಿಲ್ಲ. ಈ ಬಗ್ಗೆ ಮನೆಯಲ್ಲಿದ್ದ ಗ್ರಾಹಕರಿಗೂ ಮನವರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಈ ಗ್ರೈಂಡರ್‍ನ ಮೇಲ್ಭಾಗದಲ್ಲಿ ಮರದ ಹಲಗೆ ಅಳವಡಿಸಲು ಮೇಲ್ಛಾವಣಿಗೆ ಕಟ್ಟಿದ್ದ ಹಗ್ಗಕ್ಕೆ ಕೂಡಾ ಬೆಂಕಿ ತಗುಲಿ ಅದರಲ್ಲಿದ್ದ ವಿವಿಧ ಅಡುಗೆ ಸಾಮಾನು ಮತ್ತಿತರ ಸರಕು ಸಹಿತ ಹಲಗೆ ಗ್ರೈಂಡರ್ ಮೇಲೆ ಬಿದ್ದಾಗ ಉಂಟಾದ ಶಬ್ಧದಿಂದ ಮನೆಯ ಹೊರಗಿದ್ದವರಿಗೆ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಗ್ರೈಂಡರ್ ಮೇಲೆ ಹಲಗೆ ಬಿದ್ದ ಭಾರೀ ಶಬ್ಧವನ್ನು ಅವರು ಸ್ಪೋಟ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದೊಂದು ಗ್ರಾಹಕರ ನಿರ್ಲಕ್ಷ್ಯದಿಂದಲೇ ಸಂಭವಿಸಿದ ಹಾನಿ ಎಂಬುದು ಸ್ಪಷ್ಟವಾಗಿದೆ ಎಂದು ಕಂಪೆನಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *