ರಾಷ್ಟ್ರೀಕೃತ ಬ್ಯಾಂಕ್‍ಗಳ ಪೈಕಿ ಮುಂಚೂಣಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‍ನಲ್ಲಿ ಸ್ಥಾಪಿಸಿದ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಛದ ಹೈಮಾಸ್ಟ್ ದೀಪವನ್ನು ಬ್ಯಾಂಕಿನ ವಲಯ ಪ್ರಬಂಧಕರಾದ ಸತೀಶ್ ಕಾಮತ್ ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ಮತ್ತು ಸದಸ್ಯ ರಾಮದಾಸ ಶೆಣೈಯವರ ಮನವಿಗೆ ಸ್ಪಂದಿಸಿದ ವಲಯ ಪ್ರಬಂಧಕರು ಈ ಕೊಡುಗೆಯನ್ನು ನೀಡಿ ಉದ್ಘಾಟಿಸಿ ವಿಟ್ಲ ಪಟ್ಟಣ ಪಂಚಾಯತ್‍ಗೆ ಹಸ್ತಾಂತರಿಸಿದರು.1

ಬಳಿಕ ವಿಟ್ಲದ ಸುಬಾಸ್ ನಾಯಕ್ ರವರ ಕಟ್ಟಡದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ವರ್ತಕರ ಸಂಘದ ಅಧ್ಯಕ್ಷ ಹೆಚ್ ಜಗನ್ನಾಥ ಸಾಲಿಯಾನ್ ಮತ್ತು ವಿಟ್ಲ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್ ನಾರಾಯಣ ರೈ ಭಾಗವಹಿಸಿದ್ದರು. ವಲಯ ಪ್ರಬಂಧಕ ಸತೀಶ್ ಕಾಮತ್ ಬ್ಯಾಂಕಿನ ವಿವಿಧ ಯೋಜನೆಗಳ ವಿವರ ನೀಡಿದರು. ಪಟ್ಟಣ ಪಂಚಾಯತ್ ವಿರೋಧ ಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಲಯನ್ ಮಹಮ್ಮದ್ ಇಕ್ಬಾಲ್ ಮತ್ತು ಉದ್ಯಮಿ ಸುಬ್ರಾಯ ಪೈ ಅಭಿನಂದನಾ ಭಾಷಣ ಮಾಡಿದರು. ಪಟ್ಟಣ ಪಂಚಾಯತ್ ಸದಸ್ಯ ರಾಮದಾಸ ಶೆಣೈ ಕಾರ್ಯಕ್ರಮ ಸಂಯೋಜಿಸಿದರು.

By suddi9

Leave a Reply

Your email address will not be published. Required fields are marked *