ಬಂಟ್ವಾಳ : ತಾಲೂಕಿನಾದ್ಯಂತ ಜಾರಿಗೊಳಿಸಲಾಗಿದ್ದ ಸೆಕ್ಷನ್ ೧೪೪ ನಿಷೇದಾಜ್ನೆಯನ್ನು  ಜುಲೈ ೨೬ರವರೆಗೆ ಮತ್ತೆ ವಿಸ್ತರಿಸಿ  ಮಂಗಳೂರು  ಸಹಾಯಕ ಆಯುಕ್ತ ಎ.ಸಿ. ರೇಣುಕಾ ಪ್ರಸಾದ್  ಅವರು ಶುಕ್ರವಾರಆದೇಶ ಹೊರಡಿಸಿದ್ದಾರೆ.   ಈ ಅವಧಿಯಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ,ಬೀದಿ, ಓಣಿ,ಕೇರಿಗಳಲ್ಲಿ ಸಾರ್ವಜನಿಕ ಸ್ಥಳ,ಕಟ್ಡಡ ಮತ್ತು ಸರ್ಕಾರಿ ಕಛೇರಿ ಸುತ್ತಮುತ್ತ ಗುಂಪು ಸೇರುವುದು ಅಥವಾ ಗುಂಪು ಕೂಡುವುದನ್ನು ನಿಷೇಧಿಸಲಾಗಿದೆ.ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಚಿ, ಗದೆ, ಕೋಲು, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಿದೆ. ಯಾವುದೇ ರೀತಿಯ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಬಾರದು.IMG-20170708-WA0125-1-1

ಯಾವುದೇ ಕ್ಷಾರಕ ಅಥವಾ ಸ್ಫೊಟಕ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಬಂಟ್ವಾಳ ತಾಲೂಕು ಹೊರತುಪಡಿಸಿ ಪಕ್ಕದ ಬೆಳ್ತಂಗಡಿ,ಪುತ್ತೂರು,ಸುಳ್ಯ ತಾಲೂಕಿನಲ್ಲಿ ವಿಧಿಸಲಾಗಿದ್ದ ನಿಷೇದಾಜ್ನೆಯನ್ನು ಶುಕ್ರವಾರದಿಂದಲೇತೆರವುಗೊಳಿಸಲಾಗಿದೆ.    ಕಲ್ಲಡ್ಡದಲ್ಲಿ  ಇಬ್ಬರ ಮಧ್ಯೆ ನಡೆದ ವಯಕ್ತಿಕ ಜಗಳದ ಬಳಿಕ ಸಂಭವಿಸಿದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಅಂದರೆ ಮೇ೨೬ರಂದು ಜಾರಿಯಾಗಿದ್ದ ನಿಷೇದಾಜ್ನೆಯನ್ನು ಐದು ಬಾರಿ ಮುಂದುವರಿಸಲಾಗಿತ್ತು.ಈ ನಡುವೆ ಎರಡು ಕೊಲೆ,ಕೊಲೆಯತ್ನಪ್ರಕರಣಗಳು ಸಹಿತ ಅಹಿತಕರ ಘಟನೆಗಳು ಕೂಡ ಸಂಭವಿಸಿತ್ತು ಇದೀಗ ಜು.೨೧ ರಿಂದ ಮತ್ತೆ ೨೬ ರವರೆಗೆ ನಿಷೇದಾಜ್ನೆಯನ್ನು ವಿಸ್ತರಿಸುವುದರೊಂದಿಗೆ ತಾಲೂಕಿನ ಇತಿಹಾಸದಲ್ಲೆ ಮೊದಲಬಾರಿಗೆ ಸುದೀರ್ಘ ೬೦ ದಿನಗಳ ಕಾಲ ನಿಷೇದಾಜ್ನೆ ಜಾರಿಗೊಳಿಸಿದ ದಾಖಲೆ ಬರೆದಂತಾಗಿದೆ.

ಇನ್ನೊಂದೆಡೆ ವಿವಿಧ ಜಿಲ್ಲೆಯಿಂದ ಬಂದೋಬಸ್ತುಗಾಗಿ ಇಲ್ಲಿಗಾಗಮಿಸಿದ ಪೊಲೀಸ್ ಸಿಬ್ಬಂದಿಗಳ ಪೈಕಿ ಕೆಲವರು ಇನ್ನೂ ಕರ್ತವ್ಯದಲ್ಲಿದ್ದರೆ,ಇನ್ನು ಕೆಲವರು ಮರಳಿ ತಮ್ಮ ಜಿಲ್ಲೆಗೆ ತೆರಳಿದ್ದಾರೆ.ಆದರೆ ಆಯಕಟ್ಟಿನ ಸ್ಥಳಗಳಲ್ಲಿ ರಾತ್ರಿಹೊತ್ತು  ನಾಕಾಬಂಧಿ,ಗಸ್ತು,ಬಂದೋಬಸ್ತು ಮುಂದುವರಿದಿದೆ. ಸದ್ಯ ಬಂಟ್ವಾಳ ತಾಲೂಕು ಸಂಪೂರ್ಣಸಹಜಸ್ಥಿತಿಯಲ್ಲಿದ್ದರೂ,ಮುಂಜಾಗ್ರತೆಯ ನೆಪದಲ್ಲಿ ನಿಷೇದಾಜ್ನೆಯನ್ನು ಮುಂ    ದುವರಿಸಲಾಗಿದೆ.ಆದರೆ ಸಾರ್ವಜನಿಕರಲ್ಲಿ ಸೆಕ್ಷನ್೧೪೪ ಜಾರಿಯಲ್ಲಿದೆ ಎಂಬ ಭಾವನೆಯೇ ಇಲ್ಲ.ಎಲ್ಲರೂ ಶಾಂತಿ ,ನೆಮ್ಮದಿ,ಸೌಹಾರ್ಧತೆಯಿಂದ ತಮ್ಮ,ತಮ್ಮ ವ್ಯವಹಾರ,ದೈನಂದಿನ ಚಟುವಟಿಕೆಯಲ್ಲಿ  ತೊಡಗಿಸಿಕೊಂಡಿದ್ದಾರೆ.ವಿಶೇಷವೆಂದರೆ ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ.ಪೊಲೀಸ್ ಇಲಾಖೆಗೆ ಇದೇ ದೊಡ್ಡ ಸವಾಲಾಗಿ ಕಾಡಿದೆ.

By suddi9

Leave a Reply

Your email address will not be published. Required fields are marked *